Advertisement

ಮದ್ಯ ಸಿಗದೆ ಸ್ಯಾನಿಟೈಸರ್ ಸೇವಿಸಿ ಮೂವರು ಸಹೋದರರ ಸಾವು..!

04:17 PM Mar 24, 2021 | Team Udayavani |

ಭೋಪಾಲ್ : ಜನರು ಮದ್ಯಕ್ಕೆ ಎಷ್ಟೊಂದು ವ್ಯಸನಿಗಳಾಗಿರುತ್ತಾರೆ ಅಂದ್ರೆ ತಮಗೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ ಕುಡಿಯಲೇ ಬೇಕು ಎಂಬ ಹುಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹದ್ದೇ ಮನಸ್ಥಿತಿಯ ಮೂರು ಜನ ಸಹೋದರರು ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ಯಾನಿಟೈಸರ್ ಕುಡಿದು ಪ್ರಾಣ ಬಿಟ್ಟಿದ್ದಾರೆ.

Advertisement

ಈ ಘಟನೆಯು ಮಧ್ಯಪ್ರದೇಶ ಭೋಪಾಲ್ ನಲ್ಲಿ ನಡೆದಿದ್ದು, ಮದ್ಯಕ್ಕೆ ದಾಸರಾಗಿದ್ದ ಈ ಮೂವರು 3 ಲೀಟರ್ ಸ್ಯಾನಿಟೈಸರ್ ಸೇವಿಸಿ ಮೃತ ಪಟ್ಟಿದ್ದಾರೆ. ಸಾವನ್ನಪ್ಪಿರುವವರನ್ನು ಪರ್ವತ್ ಅಹಿರ್ವಾರ್(55), ರಾಮ್ ಪ್ರಸಾದ್(50), ಬ್ರುಹ ಅಹಿರ್ವಾರ್ ಎಂದು ಗುರುತಿಸಲಾಗಿದೆ.

ಈ ಮೂವರಲ್ಲಿ ಬ್ರುಹ ಎಂಬುವವರಿಗೆ ಮದುವೆಯಾಗಿದ್ದು, ಇನ್ನುಳಿದ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರಂತೆ. ಕೊರೊನಾ ಲಾಕ್ ಡೌನ್ ವೇಳೆ ಎಣ್ಣೆ ಸಿಗದ ಕಾರಣ ಮದ್ಯಕ್ಕೆ ದಾಸರಾಗಿದ್ದ ಇವರು ಸ್ಯಾನಿಟೈಸರ್ ಸೇವಿಸುತ್ತಿದ್ದರು ಎಂದು ವರದಿಯಾಗಿದೆ.

ಪೊಲೀಸರು ಹೇಳುವ ಪ್ರಕಾರ ಈ ಮೂರು ಜನ ಕಳೆದ ಭಾನುವಾರ ಸ್ಯಾನಿಟೈಸರ್ ಬಾಟೆಲ್ ಗಳನ್ನು ಕೊಂಡು ಕುಡಿದಿದ್ದಾರೆ. ನಂತರ ಪ್ರಸಾದ್ ಎಂಬುವವರು ಮನೆಗೆ ಹೋಗಿದ್ದು ಇನ್ನುಳಿದ ಇಬ್ಬರು ರಸ್ತೆ ಬದಿಯಲ್ಲೇ ಮಲಗಿದ್ದಾರೆ. ನಂತರ ಇವರ ಮೃತ ದೇಹಗಳು ರಸ್ತೆಯಲ್ಲೆ ಪತ್ತೆಯದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next