Advertisement

ಪುಟ್ಟರಾಜರ ಕಂಚಿನ ಮೂರ್ತಿ ಲೋಕಾರ್ಪಣೆ

08:47 AM Jul 09, 2019 | Suhan S |

ಗದಗ: ಜಿಲ್ಲೆಯ ಬೆಳವಣಿಕಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಲಿಂ| ಡಾ| ಪುಟ್ಟರಾಜ ಕವಿ ಗವಾಯಿಗಳ ಕಂಚಿನ ಮೂರ್ತಿಯನ್ನು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಲೋಕಾರ್ಪಣೆ ಮಾಡಿದರು.

Advertisement

ಇದಕ್ಕೂ ಮುನ್ನ ಲಿಂ| ಪಂಡಿತ ಪುಟ್ಟರಾಜ ಕವಿಗಳ ಕಂಚಿನ ಪ್ರತಿಮೆಗೆ ರುದ್ರಾಭೀಷೇಕ, ಹೋಮ ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಭಜನೆ, ಜಾಂಜ್‌ ಮೇಳ, ನಂದಿಕೋಲು ಸೇರಿದಂತೆ ಸಕಲ ಮಂಗಳವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಸಾನ್ನಿಧ್ಯ ವಹಿಸಿದ್ದ ತೋರಗಲ್ಲ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳು ಮಹಾ ಮಾನವರಾಗಿ ಬೆಳೆದವರು. ಲಿಂ| ಪುಟ್ಟರಾಜರಿಗೆ ಬೆಳವಣಿಕಿ ಗ್ರಾಮ ತವರು ಮನೆ ಇದ್ದಂತೆ. ಬರಗಾಲದಲ್ಲೂ ಗ್ರಾಮದ ಜನರ ಭಕ್ತಿಗೆ ಬರವಿಲ್ಲ. ಸುಮಾರು 8.50 ಲಕ್ಷ ರೂ. ವೆಚ್ಚದಲ್ಲಿ ಮೂರ್ತಿ ಮಾಡಿಸಿ ಸಮಾಜಕ್ಕೆ ಅರ್ಪಿಸಿದ್ದು ಗ್ರಾಮಸ್ಥರ ಭಕ್ತಿಯ ಪ್ರತೀಕವಾಗಿದೆ. ಪ್ರತೀಯೊಬ್ಬರೂ ಒಗ್ಗಟ್ಟಿನಿಂದ ಧರ್ಮ ಬೆಳೆಸುವ ಕಾಯಕದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ಪೂಜ್ಯರ ಮೂರ್ತಿಯನ್ನು ನಿರ್ಮಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಆದರ್ಶರಾಗಿದ್ದಾರೆ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡಕಿಮಠ ಮಾತನಾಡಿದರು.

Advertisement

ಇದೇ ವೇಳೆ ಗ್ರಾಮಸ್ಥರಿಂದ ಕಲ್ಲಜ್ಜನವರಿಗೆ 1246ನೇ ತುಲಾಭಾರ ನೆರವೇರಿಸಲಾಯಿತು.

ಸೋಮಶೇಖರ ಚರೇದ, ಶರಣ್ಯನವರು ಹಿರೇಮಠ, ಸದಾಶಿವಯ್ಯ ಬಳಗಾನೂರಮಠ, ರಾಜು ಹಿರೇಮಠ, ರುದ್ರಯ್ಯ ಸಾಲಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next