Advertisement

ನಾವು ದಿವಾಳಿಯಾಗಿದ್ದೇವೆ: ಗೋ ಫ‌ಸ್ಟ್‌: ಇಂದು, ನಾಳೆ ಎಲ್ಲಾ ವಿಮಾನ ರದ್ದು

12:19 AM May 03, 2023 | Team Udayavani |

ಮುಂಬಯಿ/ಹೊಸದಿಲ್ಲಿ: ವಾಡಿಯಾ ಗ್ರೂಪ್‌ ಮಾಲೀ­ಕತ್ವದ ಗೋ ಫ‌ಸ್ಟ್‌ ವಿಮಾನಯಾನ ಕಂಪನಿ ದಿವಾಳಿಯಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ದಾಖಲೆಗಳನ್ನು ಸಲ್ಲಿಸಿದೆ.

Advertisement

ಸದ್ಯದ ದುಃಸ್ಥಿತಿಗೆ ಅಮೆರಿಕದ ಪ್ರಾಟ್‌ ಆ್ಯಂಡ್‌ ವ್ಹಿಟ್ನಿ ಕಂಪನಿಯೇ ಕಾರಣ ಎಂದು ದೂರಿದೆ. ಹೀಗಾಗಿ, ದೇಶದ ವಿಮಾನಯಾನ ಕ್ಷೇತ್ರದ ಖಾಸಗಿ ಕಂಪನಿ ಬಾಗಿಲು ಮುಚ್ಚುವ ಹಂತ ಪ್ರವೇಶಿಸಿದೆ. ಬಿಕ್ಕಟ್ಟು ಎದುರಿಸುತ್ತಿರುವಂತೆಯೇ ಮೇ 3 ಮತ್ತು ಮೇ 5ರಂದು ವಿಮಾನಯಾನಗಳನ್ನು ರದ್ದು ಮಾಡಿದೆ.

ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಂಪನಿ ಆಡಳಿತ ಮಂಡಳಿಗೆ ನೋಟಿಸ್‌ ಜಾರಿಯಾಗಿದ್ದು, ವಿಮಾನಗಳನ್ನು ರದ್ದು ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ಕಂಪನಿ ನ್ಯಾಯಮಂಡಳಿಯಲ್ಲಿ ಜೆಟ್‌ ಏರ್‌ವೆಸ್‌ ದಿವಾಳಿ ಘೋಷಣೆ ಮಾಡಿದ ಅದೇ ಪ್ರಕ್ರಿಯೆ ಅನುಸರಿಸುತ್ತಿರುವ ದೇಶದ 2ನೇ ವಿಮಾನಯಾನ ಸಂಸ್ಥೆ ಗೋ ಫ‌ಸ್ಟ್‌ ಏರ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next