Advertisement

ಬೀದರ್ ಗೆ ಆಗಮಿಸಿದ ಬ್ರಿಟನ್ ಯಾತ್ರಾರ್ಥಿ ಮೇಲೆ ನಿಗಾ : ಜಿಲ್ಲಾಧಿಕಾರಿ ರಾಮಚಂದ್ರನ್ ಆರ್

05:48 PM Dec 23, 2020 | Suhan S |

ಬೀದರ್ : ಬ್ರಿಟನ್ ದಿಂದ ಬೀದರ್ ನಗರಕ್ಕೆ ಆಗಮಿಸಿರುವ ಯಾತ್ರಿಯ ಸಂಪರ್ಕಕ್ಕೆ ಬಂದ ಯಾತ್ರಾರ್ಥಿಯ ಒಂದು ವರ್ಷದ ಪುತ್ರಿ ಸೇರಿದಂತೆ ಎಲ್ಲ ವ್ಯಕ್ತಿಗಳ ಆರೋಗ್ಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ತಿಳಿಸಿದ್ದಾರೆ.

Advertisement

ಯಾತ್ರಾರ್ಥಿಯ ಪ್ರಥಮ 8 ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರೆಲ್ಲರೂ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರುವುದರಿಂದ ಎಲ್ಲರಿಗೂ ಮನೆಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಯಾತ್ರಾರ್ಥಿಯ ಸಂಪರ್ಕಕ್ಕೆ ಬಂದ ಎಲ್ಲರೂ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇದ್ದು ನಿಯಮಗಳ ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಎಲ್ಲ ಸಂಪರ್ಕಿತರನ್ನು ಪದೆಪದೇ ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ಮಾಡಲು ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಿ ಡಿಎಚ್‌ಒ ಕ್ರಮ ವಹಿಸಿದ್ದಾರೆ.

ಬ್ರಿಟನ್‌ದಿಂದ ಭಾರತಕ್ಕೆ ಡಿ. 11 ರಂದು ಮರಳಿದ ಯಾತ್ರಾರ್ಥಿಯು ಕಲಬುರಗಿಯಲ್ಲಿ ಉಳಿದುಕೊಂಡಿದ್ದಾರೆ. ಬಳಿಕ ಕಲಬುರಗಿಯಿಂದ ಡಿ. 21 ರಂದು ಬೀದರ್ ನ ಶಿವನಗರಕ್ಕೆ ಬಂದಿರುತ್ತಾರೆ ಎಂದು ಕಲಬುರಗಿಯ ಡಿಎಚ್‌ಒ ಅವರು ಬೀದರ್ ಡಿಎಚ್‌ಒ ಅವರಿಗೆ ಕಲ್ಬುರ್ಗಿಯ ಡಿಎಚ್‌ಒಗೆ ಡಿ. 22ರ ರಾತ್ರಿ 8 ಗಂಟೆಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ಯಾತ್ರಾರ್ಥಿಯ ಪ್ರಥಮ 8ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಡಿ. 23ರಂದು ಬೆಳಗ್ಗೆ ಪತ್ತೆ ಹಚ್ಚಿದ್ದು, ಬೆಳಗ್ಗೆ 10 ಕ್ಕೆ ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

ಎಂಟೂ ಜನರ ವರದಿ ನೆಗಟಿವ್: ಯಾತ್ರಾರ್ಥಿಯ ಪ್ರಥಮ 8 ಜನ ಸಂಪರ್ಕಿತರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ವರದಿಗಳು ನೆಗಟೀವ್ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ.ರೆಡ್ಡಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next