Advertisement

ಬ್ರಿಟನ್‌ ಪ್ರಧಾನಿ ಥೆರೆಸ್ಸಾ ಮೇಗೆ ಬಂಡಾಯದ ಬಿಸಿ

10:45 AM Nov 13, 2017 | Team Udayavani |

ಲಂಡನ್‌: ಬ್ರಿಟನ್‌ ಪ್ರಧಾನಿ ಥೆರೆಸ್ಸಾ ಮೇಗೆ ಬಂಡಾಯದ ಬಿಸಿ ತಟ್ಟಿದ್ದು, ಸ್ವಪಕ್ಷ 40 ಸಂಸದರು ಮೇ ನಾಯಕತ್ವ ವಿರೋಧಿಸಿ ಪತ್ರಕ್ಕೆ ಸಹಿ ಮಾಡಿದ್ದಾರೆ. ಕನ್ಸರ್ವೇಟಿವ್‌ ಪಕ್ಷದ ಸಂಸದರು ಮೇ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಇನ್ನು ಕೇವಲ ಎಂಟು ಸಂಸದರು ಬೇಕಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಮೇ ಸರ್ಕಾರದ ವಿರುದ್ಧ ನಡೆದ ಹಲವು ವಿವಾದಗಳ ನಂತರ ಇದು ಅತ್ಯಂತ ಮಹತ್ವದ್ದಾಗಿದೆ. ಕೆಲವೇ ದಿನಗಳ ಹಿಂದೆ ಖಾಸಗಿ ಪ್ರವಾಸದಲ್ಲಿ ಇಸ್ರೇಲ್‌ ಪ್ರಧಾನಿ ಭೇಟಿ ಮಾಡಿದ್ದರಿಂದ ಭಾರತೀಯ ಮೂಲದ ಇಂಗ್ಲೆಂಡ್‌ ಸಚಿವೆ ಪ್ರೀತಿ ಪಟೇಲ್‌
ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ಮೈಕೆಲ್‌ ಫಾಲನ್‌ ಕೂಡ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next