Advertisement
-ಇದು ಬ್ರಿಟನ್ ಪ್ರಧಾನಿ ಹುದ್ದೆಗಾಗಿ ಸ್ಪರ್ಧೆ ಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಿಷಿ ಸುನಕ್ ಅವರ ವಿನೀತ ಮಾತು.
ಮಾವ ಡಾ| ನಾರಾಯಣಮೂರ್ತಿಯವರು ಕಷ್ಟಗಳನ್ನು ಅರಿತು ಬೆಳೆದವರು. ಜಗತ್ತಿನ ಅತೀ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ನಿಜಕ್ಕೂ ಬಲು ದೊಡ್ಡ ಸಾಧನೆ ಎಂದು ರಿಷಿ ಕೊಂಡಾಡಿದ್ದಾರೆ. ತೆರಿಗೆ ಪಾವತಿ ಮಾಡುತ್ತಾಳೆ
ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪಾವತಿ ವಿಚಾರದ ಬಗ್ಗೆ ಉಂಟಾಗಿದ್ದ ವಿವಾದದ ಬಗೆಗಿನ ಪ್ರಶ್ನೆಗೂ ಚರ್ಚೆಯ ಸಂದರ್ಭ ರಿಷಿ ಸುನಕ್ ಉತ್ತರಿಸಿದರು. ನಾನು ಬ್ರಿಟಿಷ್ ನಾಗರಿಕನಾಗಿ ಸರಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದೇನೆ. ನನ್ನ ಪತ್ನಿ ಭಾರತಕ್ಕೆ ಸೇರಿದವಳಾದ್ದರಿಂದ ಆಕೆಯ ಬಗ್ಗೆ ಬೇರೆ ರೀತಿಯ ಚಿತ್ರಣ ಇದೆ. ಆದರೆ ಆಕೆ ಇನ್ಫೋಸಿಸ್‌ನಿಂದ ಪಡೆಯುತ್ತಿರುವ ಆದಾಯಕ್ಕೆ ಭಾರತ ಮಾತ್ರವಲ್ಲದೆ ಬ್ರಿಟನ್‌ನಲ್ಲಿಯೂ ತೆರಿಗೆ ಪಾವತಿಸುತ್ತಾಳೆ. ಜತೆಗೆ ವಿವಾದದ ಬಗ್ಗೆ ಸೂಕ್ತ ಸ್ಪಷ್ಟನೆಯನ್ನೂ ನೀಡಿದ್ದಾಳೆ ಎಂದು ಟೀಕಾಕಾರರಿಗೆ ಸುನಕ್ ತಿರುಗೇಟು ನೀಡಿದ್ದಾರೆ.
Related Articles
Advertisement
ರಿಷಿಗೇ ಜಯ : ಸಮೀಕ್ಷೆರವಿವಾರ ನಡೆದ ಟಿವಿ ಚರ್ಚೆಯ ಬಳಿಕ ಪ್ರಧಾನಿಯಾಗಲು ತಕ್ಕ ವ್ಯಕ್ತಿ ಯಾರು ಎಂಬ ಬಗ್ಗೆ ಕ್ಷಿಪ್ರ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ರಿಷಿ ಅವರಿಗೇ ಹೆಚ್ಚು ಮತಗಳು ಪ್ರಾಪ್ತವಾಗಿವೆ. ಚರ್ಚೆಯಲ್ಲಿ 1,001 ಮಂದಿ ಭಾಗವಹಿಸಿದ್ದರು. ಉಳಿದ ಅಭ್ಯರ್ಥಿಗಳಿಗೆ ಹೋಲಿಸಿದರೆ ಹೆಚ್ಚು ಮಂದಿ (ಶೇ. 24 ಮಂದಿ) ರಿಷಿ ಅವರೇ ಪ್ರಧಾನಿ ಹುದ್ದೆಗೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.