Advertisement

ಬ್ರೆಕ್ಸಿಟ್‌: ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದ ಬ್ರಿಟನ್‌ ಪ್ರಧಾನಿ

06:15 AM Jan 17, 2019 | Team Udayavani |

ಲಂಡನ್‌ : ಅತ್ಯಂತ ಕುತೂಹಲಕಾರಿಯಾಗಿದ್ದ ವಿವಾದಾತ್ಮಕ ಬ್ರೆಕ್ಸಿಟ್‌ ವಿಷಯದಲ್ಲಿನ ವಿಶ್ವಾಸ ಮತವನ್ನು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಬ್ರಿಟನ್‌ ಸಂಸತ್ತಿನಲ್ಲಿ ಗೆದ್ದುಕೊಂಡಿದ್ದಾರೆ. 

Advertisement

ಬ್ರಿಟನ್‌ ಸಂಸದರು ತಮ್ಮ ಎಲ್ಲ ಸ್ವ-ಹಿತಾಸಕ್ತಿಗಳನ್ನು ಬದಿಗಿರಿಸಿ ಬ್ರೆಕ್ಸಿಟ್‌ ಯಶಸ್ಸಿಗೆ ರಚನಾತ್ಮಕವಾಗಿ ಶ್ರಮಿಸಬೇಕು ಎಂದು ತೆರೇಸಾ ಮೇ ಕರೆ ನೀಡಿದ್ದಾರೆ.

ಬ್ರಿಟನ್‌ ಪ್ರಧಾನಿ ಮೇ ಅವರು ವಿಶ್ವಾಸ ಮತವನ್ನು 325 – 306 ಮತಗಳ ಅಂತರದಲ್ಲಿ, 19 ಮತಗಳ ಬಹುಮತದೊಂದಿಗೆ ನಿನ್ನೆ ಬುಧವಾರ ಗೆದ್ದುಕೊಂಡರು. ಒಂದು ದಿನದ ಹಿಂದಷ್ಟೇ ಅವರ ಸರಕಾರಕ್ಕೆ ಐತಿಹಾಸಿಕ ಸಂಸತ್‌ ಸೋಲು ಉಂಟಾಗಿ ತೀವ್ರ ಮುಖಭಂಗವಾಗಿತ್ತು. ಐರೋಪ್ಯ ಒಕ್ಕೂಟದಿಂದ ಹೊರಬರುವ ಉಪಕ್ರಮವೇ ಬ್ರೆಕ್ಸಿಟ್‌ ಆಗಿದೆ. 

10 ಡೌನಿಂಗ್‌ ಸ್ಟ್ರೀಟ್‌ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪ್ರಧಾನಿ ಮೇ ಅವರು, ಸರಕಾರ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದಿದೆ; ಇದರಿಂದಾಗಿ ಬ್ರೆಕ್ಸಿಟ್‌ ವಿಷಯದಲ್ಲಿ ಮುಂದಡಿ ಇಡುವುದಕ್ಕೆ ನಮಗೆಲ್ಲ ಅವಕಾಶವನ್ನು ಕಲ್ಪಿಸಿದೆ. ಬ್ರಿಟನ್‌ ಮಹಾಜನತೆ ಬ್ರೆಕ್ಸಿಟ್‌ ಪೂರೈಸುವ ದಿಶೆಯಲ್ಲಿ ಮುಂದಡಿ ಇಡಬೇಕೆಂದು ಬಯಸುತ್ತದೆ. ಅಂತೆಯೇ ನಾವು ನಡೆದುಕೊಳ್ಳಬೇಕಿದೆ. ಆ ಪ್ರಕಾರ ನಾವೆಲ್ಲ ನಮ್ಮ ನಮ್ಮ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಪ್ರಜೆಗಳ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next