ಲಂಡನ್: ಮಾದಕದ್ರವ್ಯ ಸೇವನೆ ಮಾಡಿ ಮನೆಯೊಳಗೆ ನುಗ್ಗಿ ಶವ ಸಂಭೋಗ ನಡೆಸಿದ ಆರೋಪದಡಿಯಲ್ಲಿ ಯುವಕನೊಬ್ಬನಿಗೆ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ.
ಕಳೆದ ನವೆಂಬರ್ 11ರಂದು ಬರ್ಮಿಂಗ್ ಹ್ಯಾಮ್ ನ ಗ್ರೇಟ್ ಬಾರ್ರ್ ವಾಸ್ ಸಾಲ್ ರಸ್ತೆ ಸಮೀಪದ ಕೋ ಆಪರೇಟಿವ್ ಫ್ಯೂನರಲ್ ಪಾರ್ಲರ್ ನಲ್ಲಿ ಇರಿಸಿದ್ದ ಮಹಿಳೆಯ ಶವದ ಜೊತೆ ಕಾಸಿಂ ಖುರ್ರಮ್(23) ಎಂಬ ಯುವಕ ಸಂಭೋಗ ನಡೆಸಿದ್ದ ಘಟನೆ ನಡೆದಿತ್ತು.
ಪ್ರಕರಣದ ವಾದ, ಪ್ರತಿವಾದ ಆಲಿಸಿದ್ದ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಜಡ್ಜ್ ಮೆಲ್ಬೊರ್ನ್ ಐಮನ್, ಇದೊಂದು ಎಲ್ಲಾ ಮನುಷ್ಯತ್ವವನ್ನು ಮೀರಿದ ಅಪರಾಧವಾಗಿದೆ. ನಾನು ಇಂತಹ ಪ್ರಕರಣವನ್ನು ಕಂಡಿಲ್ಲ. ಶವದ ಜೊತೆಯೂ ಇಷ್ಟು ಅಮಾನವೀಯವಾಗಿ ನಡೆದುಕೊಂಡಿರುವುದನ್ನುಊಹಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
ವಿಪರೀತವಾಗಿ ಅಮಲು ಪದಾರ್ಥ ಸೇವಿಸಿ ಕೋ ಆಪರೇಟಿವ್ ಫ್ಯೂನರಲ್ ಪಾರ್ಲರ್ ನಲ್ಲಿ ಇರಿಸಿದ್ದ ಶವ ಪೆಟ್ಟಿಗೆಯೊಳಗೆ ಕೃತ್ಯ ಎಸಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಸಿಂನನ್ನು ಬಂಧಿಸಿದ್ದರು.