Advertisement

ಬ್ರಿಟಿಷ್‌ ಬಯೋಲಾಜಿಕಲ್ಸ್‌ಗೆ ಪ್ರಶಸ್ತಿ

11:42 AM Mar 16, 2018 | Team Udayavani |

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಮೂಲದ ನ್ಯೂಟ್ರಿಸ್ಯೂಟಿಕಲ್‌ ಕಂಪನಿ ಬ್ರಿಟಿಷ್‌ ಬಯೋಲಾಜಿಕಲ್ಸ್‌ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.

Advertisement

ಯುಕೆ ಅಸಿಯಾನ್‌ ಬಿಸಿನೆಸ್‌ ಕೌನ್ಸಿಲ್‌ ಸಹಯೋಗದಲ್ಲಿ ವೈಟ್‌ ಪೇಜ್‌ ಇಂಟರ್‌ನ್ಯಾಷನಲ್‌ ಆಯೋಜಿಸಿದ್ದ ವಿಶ್ವದ ಶ್ರೇಷ್ಠ ಬ್ರಾಂಡ್‌ಗಳು ಮತ್ತು ಅಸಾಮಾನ್ಯ ನಾಯಕತ್ವವುಳ್ಳ  ಸಂಸ್ಥೆಗಳಿಗೆ ನೀಡುವ “ಏಷಿಯಾಸ್‌ ಮೋಸ್ಟ್‌ ಅಡೆರ್‌ ಬ್ರಾಂಡ್‌’, “ಏಷಿಯಾಸ್‌ ಮೋಸ್ಟ್‌ ಅಡೆರ್‌ ಬಿಸಿನೆಸ್‌ ಲೀಡರ್‌’ ಮತ್ತು “ಲೈಫ್‌ ಟೈಂ ಅಚೀವ್‌ಮೆಂಟ್‌ ಅವಾರ್ಡ್‌’ ಈ ಮೂರೂ ಪ್ರಶಸ್ತಿಗಳನ್ನು ಬ್ರಿಟಿಷ್‌ ಬಯೋಲಾಜಿಕಲ್ಸ್‌ ಮತ್ತು ಕಂಪನಿಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌. ರೆಡ್ಡಿ ಅವರಿಗೆ ದೊರೆತಿದೆ.

ಇತೀ¤ಚೆಗೆ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಬ್ರಿಟಿಷ್‌ ಬಯೋಲಾಜಿಕಲ್ಸ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌.ರೆಡ್ಡಿ ಅವರ ಪರವಾಗಿ ಸಂಸ್ಥೆಯ ಕಾರ್ಪೊರೇಟ್‌ ಕಮ್ಯೂನಿಕೇಷನ್ಸ್‌ ಮುಖ್ಯಸ್ಥ ಎಸ್‌.ಕೆ.ಅಜಿತ್‌ ಪ್ರಶಸ್ತಿಗಳನ್ನು ಸೀಕರಿಸಿದರು. ಕಂಪನಿ ಮತ್ತು ತಮಗೆ ದೊರೆತ ಜೀವಮಾನ ಸಾಧನೆ ಪ್ರಶಸ್ತಿ ಕುರಿತು ಮಾತನಾಡಿದ ವಿ.ಎಸ್‌.ರೆಡ್ಡಿ ಅವರು, ಸಂಸ್ಥೆಗೆ ಒಂದೇ ಬಾರಿಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತಿರುವುದು ಹೆಮ್ಮೆಯ ಸಂಗತಿ.

ಸಮಾಜದ ಒಳಿತಿಗಾಗಿ, ಜನರ ಯೋಗಕ್ಷೇಮಕ್ಕಾಗಿ ನವೀನ ಪೌಷ್ಠಿಕ ಔಷಧಾಹಾರ ಉತ್ಪನ್ನಗಳನ್ನು ಹಾಗೂ ನಮ್ಮ ಸ್ಥಿರವಾದ ಪ್ರಯತ್ನಕ್ಕಾಗಿ ದೊರೆತ ಬಹುದೊಡ್ಡ ಪುರಸ್ಕಾರಗಳಿವು. ಪ್ರಶಸ್ತಿಗಳು ನಮ್ಮ ಬ್ರಾಂಡ್‌, ಗುಣಮಟ್ಟ, ಶ್ರೇಷ್ಠತೆ, ನಾಯಕತ್ವ ಮತ್ತು ಉದ್ಯಮಶೀಲತೆಯನ್ನು ಗುರುತಿಸುತ್ತವೆ. ಈ ಸಾಧನೆಯನ್ನು ನಮ್ಮ ಎಲ್ಲ ವೈದ್ಯಕೀಯ ಬಂಧುಗಳು ಹಾಗೂ ಸಹಯೋಗಿಗಳೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next