ಬಹಳಷ್ಟು ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಸರಕಾರಗಳೂ ಕಂಗಾಲಾಗಿದೆ. ಸದ್ಯ ಅದೇ ಪರಿಸ್ಥಿತಿ ಲಂಡನ್‌ನಲ್ಲಿ ಇದೆ.
Advertisement
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉದ್ಭವಿಸಿದೆ. ಇಂಗ್ಲೆಂಡ್‌ನ ಕೆಲವು ಆರೋಗ್ಯ ರಕ್ಷಣಾ ಕಾರ್ಯಕರ್ತರು ಎದುರಿಸುತ್ತಿರುವ ಸುರಕ್ಷಾ ಸಲಕರಣೆಗಳ ಕೊರತೆಯ ವಾಸ್ತವ ವನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ನಮ್ಮ ದೇಶದ ಅವ್ಯವಸ್ಥೆಯನ್ನು ನಾವು ಬಹಿರಂಗಗೊಳಿಸುವುದು ಇಷ್ಟವಿಲ್ಲ. ಆದಾಗ್ಯೂ ಪರಿಸ್ಥಿತಿ ಸುಧಾರಣೆ ಆಗಲಿ ಎಂಬ ನಿಟ್ಟಿನಲ್ಲಿ ಹೇಳಬೇಕಿದೆ ಎಂದು ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ವೈದರ ಭವಿಷ್ಯ ಮತ್ತು ಈಗಿನ ಅಗತ್ಯತೆಯನ್ನು ಮನಗಂಡು ಬಿಬಿಸಿ ಆವೈದ್ಯರ ಹೆಸರನ್ನು ಬದಲಾಯಿಸಿ ವರದಿ ಮಾಡಿದೆ.
ಇದರಿಂದ ಸರಕಾರ ಎಚ್ಚೆತ್ತುಕೊಂಡಿದ್ದು, ವಿತರಣಾ ಸಮಸ್ಯೆಗಳನ್ನು ಒಪ್ಪಿಕೊಂಡಿದೆ. ಇದೀಗ ಸೇನೆಯ ನೆರವಿನೊಂದಿಗೆ ಉಪಕರಣಗಳನ್ನು ಪೂರೈಸಲು ಮುಂದಾಗಿದೆ ಎನ್ನಲಾಗಿದೆ.
Related Articles
ಕೋವಿಡ್-19 ರೋಗಿಗಳಿಗೆ ತಮ್ಮ ಸುರಕ್ಷೆಯ ಕಾಳಜಿಯೊಂದಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಸಿಬಂದಿ ಈಗಾಗಲೇ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ 13 ಗಂಟೆಗಳ ಕಾಲ ಅನಾರೋಗ್ಯ ಪೀಡಿತ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಇವರು ಕ್ಲಿನಿಕಲ್ ತ್ಯಾಜ್ಯ ಚೀಲಗಳಿಂದ ತಯಾರಿಸಿದ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ವಿನ್ಯಾಸಗೊಳಿಸಿದ ರಕ್ಷಣಾ ಸಾಮಗ್ರಿಗಳನ್ನು ಬಳಸುತ್ತಾರೆ. ಸರಕಾರ ಸಾರ್ವಜನಿಕರಿಗೆ 2 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೇಳಿದೆ. ಅಲ್ಲಿನ ವೈದ್ಯರಿಗೆ ಯಾವುದೇ ಪೂರಕ ಕ್ರಮಗಳಿಲ್ಲ. ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ವೈದ್ಯರಿಗೆ ಟೋಪಿಗಳನ್ನು ಮತ್ತು ಮುಖಕ್ಕೆ ಮಾಸ್ಕ್ಗಳನ್ನು ಧರಿಸಲು ತಿಳಿಸಲಾಗಿದೆ. ಅವುಗಳು ತೂತಾಗಿದ್ದು, ಯಾವುದೇ ರಕ್ಷಣೆ ದೊರೆಯದು ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಲಾಗಿದೆ.
Advertisement