ಬ್ರಿಸ್ಬೇನ್: ಬಾರ್ಡರ್- ಗವಾಸ್ಕರ್ ಸರಣಿಯ ಅಂತಿಮ ಪಂದ್ಯದ ಅಂತಿಮ ದಿನದ ಆಟ ಜಾರಿಯಲ್ಲಿದ್ದು ಸರಣಿಯ ವಿಜೇತ ಯಾರು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಪಂದ್ಯ ಗೆಲ್ಲಲು ಆಸೀಸ್ 328 ರನ್ ಗುರಿ ನೀಡಿದ್ದು, ಮೊದಲ ಸೆಶನ್ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.
ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಭಾರತ ತಂಡ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ ಏಳು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್ ಗೆ ಜೊತೆಯಾದ ಶುಭ್ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ 65 ರನ್ ಜೊತೆಯಾಟ ನಡೆಸಿದ್ದಾರೆ.
ಇದನ್ನೂ ಓದಿ:ಬದಲಾದ ಭಾರತ ಕ್ರಿಕೆಟ್ ಮನೋಭಾವ
ಉತ್ತಮ ಬ್ಯಾಟಿಂಗ್ ಮಾಡಿದ ಗಿಲ್ ಎರಡನೇ ಅರ್ಧಶತಕ ಬಾರಿಸಿದರು. ಐದು ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದ್ದು, ಪೂಜಾರ ಎಂಟು ರನ್ ಗಳಿಸಿ ಆಡುತ್ತಿದ್ದಾರೆ.
ಆಸೀಸ್ ಪರ ಕಮಿನ್ಸ್ ಒಂದು ವಿಕೆಟ್ ಪಡೆದರು. ಸರಣಿ 1-1 ರಲ್ಲಿ ಸಮಬಲವಾಗಿದ್ದು, ಈ ಪಂದ್ಯ ಗೆದ್ದವರಿಗೆ ಸರಣಿ ಒಲಿಯಲಿದೆ. ಪಂದ್ಯ ಡ್ರಾ ಆದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿ ಭಾರತದ ಬಳಿ ಉಳಿಯಲಿದೆ.