Advertisement

2032ರ ಒಲಿಂಪಿಕ್ಸ್‌ ಗೆ ಬ್ರಿಸ್ಬೇನ್‌ ಆತಿಥ್ಯ : ಅನುಮೋದನೆ ನೀಡಿದ ಐಒಸಿ

12:55 AM Jun 12, 2021 | Team Udayavani |

ಸಿಡ್ನಿ: ಆಸ್ಟ್ರೇಲಿಯದ ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯ ವಹಿಸಲು ಐಒಸಿ ಬಹುತೇಕ ಅನುಮೋದನೆ ನೀಡಿದೆ.

Advertisement

“ಆಸ್ಟ್ರೇಲಿಯದ ಬ್ರಿಸ್ಬೇನ್‌ 2032ರಲ್ಲಿ ಒಲಿಂಪಿಕ್ಸ್‌ ನಡೆಸಲು ಒಲಿಂಪಿಕ್ಸ್‌ ಕಾರ್ಯ ನಿರ್ವಾಹಕ ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ. ಯೋಜನೆಯ ಪ್ರತೀ ಅಂಶಗಳನ್ನು ಆಸ್ಟ್ರೇಲಿಯನ್‌ ಒಲಿಂಪಿಕ್ಸ್‌ ಸಮಿತಿ ಮತ್ತು ಅವರ ಪಾಲುದಾರರು ಪರೀಕ್ಷಿ ಸಲಿದ್ದಾರೆ’ ಎಂದು ಐಒಸಿ ತಿಳಿಸಿದೆ.

ಜು. 21ರಂದು ಟೋಕಿಯೊದಲ್ಲಿ ನಡೆಯುವ ಐಒಎ ಸಭೆಯಲ್ಲಿ 2032ರ ಒಲಿಂಪಿಕ್ಸ್‌ ಆತಿಥ್ಯ ಅಧಿಕೃತಗೊಳ್ಳಲಿದೆ. ಆದರೆ ಬ್ರಿಸ್ಬೇನ್‌ ಹೊರತುಪಡಿಸಿದರೆ ಬೇರೆ ಯಾವುದೇ ನಗರಗಳು ಬಿಡ್‌ನ‌ಲ್ಲಿ ಇಲ್ಲವಾದ ಕಾರಣ ಆಸ್ಟ್ರೇಲಿಯದ ಹಾದಿ ಸುಗಮಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next