Advertisement

ಮತದಾರರನುನ್ನು ಪಕ್ಷದೆಡೆಗೆ ಸೆಳೆಯಿರಿ: ಅರಸು

06:12 AM Mar 08, 2019 | |

ದಾವಣಗೆರೆ: ಕೆಲವಾರು ವಾರ್ಡ್‌, ಬೂತ್‌ ಮಟ್ಟದಲ್ಲಿ ಇರುವಂತಹ ಸಾವಿರಾರು ಸಂಖ್ಯೆಯಲ್ಲಿನ ಮತದಾರರ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದು ಮೈಸೂರಿನ ಯುವ ಕಾಂಗ್ರೆಸ್‌ ಮುಖಂಡ ರಘುರಾಜ್‌ ಅರಸು ಹೇಳಿದ್ದಾರೆ.

Advertisement

ಗುರುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಬಡಾವಣೆಯಲ್ಲಿರುವ 1,500 ಮನೆಗಳಲ್ಲಿ ಒಂದೊಂದೇ ಮತ ಇರುವುದು ಸಾಕಷ್ಟು ಅನುಮಾನ, ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಬೂತ್‌ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದರು. 

ಈಚೆಗೆ ಚುನಾವಣೆ ನಡೆದ ತೆಲಂಗಾಣದಲ್ಲಿ ಅಂತಹ ವಾತಾವರಣ ಇದ್ದ ಕಾರಣಕ್ಕೆ ಕಾಂಗ್ರೆಸ್‌ ಹಿನ್ನೆಡೆ ಅನುಭವಿಸಿದ್ದನ್ನ ಮರೆಯುವಂತಿಲ್ಲ. ಹಾಗಾಗಿ ಎಲ್ಲರೂ ಅಂತಹದ್ದನ್ನ ಗಂಭೀರವಾಗಿ ಪರಿಗಣಿಸಬೇಕು. ಮೂಲ ಕಾರಣ ಪತ್ತೆ ಹಚ್ಚುವಂತಾಗಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ರೈತರಿಗೆ ಸದಾ ಬೆನ್ನಲುಬಾಗಿ ಕೆಲಸ ಮಾಡುತ್ತಿದೆ. ರೈತರಿಗೆ ಪಕ್ಷದ ಸಾಧನೆ ತಿಳಿಸುವ ಜೊತೆಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವಂತಹ ಮತದಾರರ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಂತಹ ಎಲ್ಲಾ ಮತದಾರರ ಮಾಹಿತಿ ಸಂಗ್ರಹಿಸಿ, ಪಕ್ಷದೆಡೆಗೆ ಸೆಳೆಯಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಉಪ ಮೇಯರ್‌ ಕೆ. ಚಮನ್‌ಸಾನ್‌ ಮಾತನಾಡಿ, ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುತ್ತಲೇ ಇದೆ. ಚುನಾವಣೆ ಹತ್ತಿರಕ್ಕೆ ಬಂದಾಗಲೇ ಭಯೋತ್ಪಾದಕರ ದಾಳಿ, ಅದಕ್ಕೆ ಪ್ರತಿ ದಾಳಿ ನಡೆಯುತ್ತದೆ. ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಪ್ರಶ್ನಿಸುವಂತೆಯೇ ಇಲ್ಲ. ಒಂದೊಮ್ಮೆ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ ಎಂದು ದೂರಿದದರು.

Advertisement

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಸಂಘರ್ಷಕ್ಕೆ ಇಳಿಯುವ ಮೂಲಕ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕು. ನರೇಂದ್ರ ಮೋದಿ ಅವರು ನೀಡಿರುವ ಭರವಸೆ ಈಡೇರಿಸದೇ ಇರುವುದು, ಬರೀ ಸುಳ್ಳು ಹೇಳುವುದನ್ನ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುವ ಮೂಲಕ
ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಸದಸ್ಯ ಜಿ.ಸಿ. ನಿಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಅವರಂತಹ ಶ್ರೀಮಂತರಿಗೆ ನೆರವು ನೀಡುತ್ತಿದೆ. ದೇಶದ ಬೆನ್ನೆಲುಬು ರೈತರಿಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ ಎಂದು ದೂರಿದರು. ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌
ಪೈಲ್ವಾನ್‌, ಡಾ| ಸಿ.ಆರ್‌. ನಸೀರ್‌ ಅಹಮ್ಮದ್‌, ರಹಮತ್‌ವುಲ್ಲಾ, ಕೆ. ಆರೀಫ್‌ಖಾನ್‌, ಲಿಂಗರಾಜು, ಚಂದ್ರು ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next