ವಿಜಯಪುರ :” ನಾವು ಬ್ಯುಸಿ ಇದ್ದೀವಿ. ಹಿಡಿದುಕೊಂಡಿರುವ ಕಳ್ಳನನ್ನು ನೀವೇ ಬೈಕ್ ನಲ್ಲಿ ಠಾಣೆಗೆ ಕರೆದುಕೊಂಡು ಬನ್ನಿ” ಎಂದು ದೂರುದಾರರಿಗೆ ಪೊಲೀಸರು ಆದೇಶ ಮಾಡಿ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಫೋನ್ ಸಂಭಾಷಣೆ ಈಗ ವೈರಲ್ ಆಗಿದೆ.
ಪಟ್ಟಣ ಸಮೀಪದ ಆವತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಂಬ್ರಹಳ್ಳಿ ಗ್ರಾಮದಲ್ಲಿ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ರಾತ್ರಿ ವೇಳೆ ಬೋರ್ ವೆಲ್ ಗಳಲ್ಲಿ ಕೇಬಲ್ ಗಳನ್ನು ಕಳ್ಳತನ್ನ ಮಾಡುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದಿರುವ ಘಟನೆ ಬುಧವಾರ ತಡೆ ರಾತ್ರಿ ನಡೆದಿದೆ.
ವಿಜಯಪುರ ಪಟ್ಟಣದ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ಎಂಬ್ರಹಳ್ಳಿ ಗ್ರಾಮದಲ್ಲಿಸುಮಾರು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ರಾತ್ರಿ ವೇಳೆ ಬೋರ್ ವೆಲ್ ಗಳಲ್ಲಿ ಕೇಬಲ್ ಗಳ ಕಾಪರ್ ತೆಗೆಯುತ್ತಿದ್ದ ಕಳ್ಳನ ಹಿಡಿದು ರಾತ್ರಿ 11 ಗಂಟೆಗೆ ಪೋಲಿಸರಿಗೆ ಪೋನ್ ಮಾಡಿದ್ದಾರೆ.
ವಿಜಯಪುರ ಪೋಲಿಸ್ ರು ನಾವು ಬ್ಯೂಸಿ ಇದ್ದೀವಿ, ನೀವೇ ಕರೆದುಕೊಂಡು ಬನ್ನಿ ಎಂದು ನಿರ್ಲಕ್ಷದ ಮಾತುಗಳನ್ನು ಆಡಿ ರೈತರ ದೂರಿನ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಪೊಲೀಸರ ನಿರ್ಲಕ್ಷದ ಮಾತು ಆಡಿಯೋ ರೆಕಾರ್ಡ್ ಹಿರಿಯ ಅಧಿಕಾರಿಗಳಿಗೆ ತಲುಪಿದ ನಂತರ ಮದ್ಯರಾತ್ರಿ 1 ಗಂಟೆಗೆ ಗ್ರಾಮಕ್ಕೆ ಬಂದ 112 ವಾಹನ ಹಾಗೂ ವಿಶ್ವನಾಥಪುರ ಪೊಲಿಸರು, ನೀವು ವಿಜಯಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಂದು ಬಹಳ ಅಸಡ್ಡೆ ಇಂದ ರೈತರ ಬಳಿ ನಡೆದುಕೊಂಡಿದ್ದಾರೆ. ಆದರೆ ಅವರೂ ಸಹ ಕಳ್ಳನ ಕರೆದುಕೊಂಡು ಹೋಗುವ ಬದಲು ನಿವೇ ಬೈಕ್ ನಲ್ಲಿ ಕರೆದುಕೊಂಡು ಬನ್ನಿ ಏನು ಹೇಳಿ ಸ್ಥಳದಿಂದ ಹೋರಟು ಹೋಗಿದ್ದಾರೆ.
ಕಳ್ಳನನ್ನ ಹಿಡಿದಿದ್ದಲ್ಲದೆ, ಪೊಲೀಸ್ ಠಾಣೆಗೆ ಗ್ರಾಮಸ್ಥರೇ ಕರೆದುಕೊಂಡು ಹೋಗಬೇಕಾ? ರಾತ್ರಿ ವೇಳೆ ಗಸ್ತು ತಿರುಗುವ 112 ಪೊಲೀಸರೇ ಇದ್ಯಾಕೆ ನಿಮಗೆ ಈ ನಿರ್ಲಕ್ಷ, ಕಳ್ಳನ ಹಿಡಿದು ಜನರೇ ನಿಮಗೆ ಪೋನ್ ಮಾಡಿದರೆ ಯಾಕೀ ಅಸಡ್ಡೆ ಎಂದು ಪೊಲೀಸರ ನಿರ್ಲಕ್ಷಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿಜಯಪುರ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸರು ಪ್ರಕರಣ ಭೇದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳ್ಳನ ಹಿಡಿದುಕೊಟ್ಟರು ಸಹ ಕಳ್ಳನನ್ನು ಕರೆದುಕೊಂಡು ಹೋಗಲು ಪೊಲೀಸರು ನಿರ್ಲಕ್ಷ್ಯ ತೋರಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.