Advertisement

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

09:20 PM Dec 03, 2021 | Team Udayavani |

ನವದೆಹಲಿ: “ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಕಾನೂನನ್ನು ಜಾರಿಗೆ ತನ್ನಿ. ಮುಂದಿನ ಚುನಾವಣೆಯಲ್ಲಿ ಜನರು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುತ್ತಾರೆ” ಎಂದು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಅಖಂಡ ಹೋರಾಟ ನಡೆಸಿದ್ದ ಭಾರತ್‌ ಕಿಸಾನ್‌ ಯೂನಿಯನ್‌ (ಬಿಕೆಯು) ಮುಖ್ಯಸ್ಥ ರಾಕೇಶ್‌ ಟಿಕಾಯತ್‌, ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕೃಷಿ ಕಾಯ್ದೆಗಳು ಜಾರಿಗೊಳ್ಳುವ ಮುನ್ನವೇ ರೈತರಿಗೆ ಸಂಕಷ್ಟಗಳಿದ್ದವು. ಹಾಗಾಗಿ, ಕೃಷಿ ಕಾಯ್ದೆ ಹಿಂಪಡೆದ ಸಂದರ್ಭದಲ್ಲೇ ರೈತರ ಸಮಸ್ಯೆಗಳಿಗೂ ಇತಿಶ್ರೀ ಹಾಡಿರಿ ಎಂದು ನಾವು (ರೈತ ಸಂಘಟನೆಗಳು) ಕೇಂದ್ರವನ್ನು ಕೋರುತ್ತಿದ್ದೇವೆ” ಎಂದರು.

ಆಗ ಮೋದಿಯವರೇ ಬೆಂಬಲಿಸಿದ್ದರು!
“2011ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಕೃಷಿ ಉತ್ಪನ್ನಗಳ ಮೇಲಿನ ಬೆಂಬಲ ಬೆಲೆಗಳ ಬಗ್ಗೆ ಕಾನೂನು ತರಲು ಒಂದು ಸಮಿತಿ ರೂಪಿಸಿತ್ತು. ಅದರಲ್ಲಿ ಆಗ, ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೂ ಸದಸ್ಯರಾಗಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ 413 ಕೋವಿಡ್‌ ಪಾಸಿಟಿವ್‌ ಸೋಂಕು ಪತ್ತೆ: ನಾಲ್ವರು ಸಾವು 

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದರು. ಈಗ, ಅವರೇ ಪ್ರಧಾನಿ ಹುದ್ದೆಯಲ್ಲಿದ್ದಾರೆ, ನಿರ್ಧಾರ ಕೈಗೊಳ್ಳುವ ಅವಕಾಶ ಅವರಿಗೇ ಇದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next