Advertisement

ಪಟ್ಟದಕಲ್ಲಿಗೆ ಬರುವಾಗ ರೊಕ್ಕ ತನ್ನಿ!

10:20 AM Sep 01, 2019 | Suhan S |

ಅಮೀನಗಡ: ವಿಶ್ವವಿಖ್ಯಾತ ಐತಿಹಾಸಿಕ ಪ್ರವಾಸಿ ತಾಣಗಳನ್ನು ನೀವು ನೋಡಲು ಬರುತ್ತೀರಾ ಹಾಗಾದರೆ ನೆನಪಿಟ್ಟುಕೊಳ್ಳಿ, ನೀವು ಬರುವಾಗ ನಿಮ್ಮ ಜೇಬು ತುಂಬಾ ಹಣ ತೆಗೆದುಕೊಂಡು ಬನ್ನಿ..!

Advertisement

ಹೌದು. ಪಟ್ಟದಕಲ್ಲು ಹಾಗೂ ದೇವಾಲಯಗಳ ತೊಟ್ಟಿಲು ಖ್ಯಾತಿಯ ರಾಷ್ಟ್ರಮಟ್ಟದ ಪ್ರವಾಸಿ ತಾಣ ಐಹೊಳೆಯ ಪ್ರವಾಸಿ ಕೇಂದ್ರಗಳಲ್ಲಿ ಎಟಿಎಂ ಸೌಲಭ್ಯ ಇಲ್ಲ. ಹೀಗಾಗಿ ಈ ಕಡೆ ಪ್ರವಾಸಕ್ಕೆಂದು ಬರುವವರಿಗೆ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ.

ಪಟ್ಟದಕಲ್ಲು ಜಿಲ್ಲೆಯ ಪ್ರಸಿದ್ಧ ಪರಂಪರೆ ತಾಣ. ತಾಲೂಕು ಕೇಂದ್ರ ಬಾದಾಮಿಯಿಂದ 21 ಕಿ.ಮೀ. ದೂರದಲ್ಲಿದೆ. ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರ ಮತ್ತು ಭಾರತದಲ್ಲಿನ ವಿಶ್ವ ಪರಂಪರೆಯ ತಾಣವಾಗಿದೆ. ಇಂತಹ ಐತಿಹಾಸಿಕ ಕೇಂದ್ರಗಳಿಗೆ ದೇಶ-ವಿದೇಶಗಳಿಂದ ಬರುವ ಲಕ್ಷಾಂತರ ಪ್ರವಾಸಿಗರಿಗೆ ತುರ್ತು ಪರಿಸ್ಥಿತಿಯಲ್ಲಿ ಹಣ ಪಡೆಯಲು ಎಟಿಎಂ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಉಂಟಾಗಿದೆ.

ವ್ಯಾಪಾರ ವಹಿವಾಟಿಗೆ ತೊಂದರೆ: ಐತಿಹಾಸಿಕ ಪ್ರವಾಸಿ ಕೇಂದ್ರಗಳಾದ ಐಹೊಳೆ ಮತ್ತು ಪಟ್ಟದಕಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿ ಬಂದ ಪ್ರವಾಸಿಗರ ಖಾತೆಯಲ್ಲಿ ಹಣಯಿದ್ದರೂ ಕೂಡಾ ಎಟಿಎಂ ಇಲ್ಲದ ಕಾರಣ ತುರ್ತಾಗಿ ಹಣ ತೆಗೆದುಕೊಳ್ಳದ ಪರಿಸ್ಥಿತಿಯಿದೆ. ಇದರಿಂದ ಅವರು ದೂರದ ಬಾದಾಮಿ, ಅಮೀನಗಡ, ಹುನಗುಂದ ಪಟ್ಟಣಗಳಿಗೆ ತೆರಳಬೇಕಿದೆ. ಪ್ರವಾಸಿ ಕೇಂದ್ರದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಪರದಾಟ: ಐಹೊಳೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್‌ಗಳು ಕೂಡಾ ಇವೆ. ಆದರೆ, ಎಟಿಎಂ ಇಲ್ಲದ ಕಾರಣ ಜನ ಗಂಟೆಗಟ್ಟಲೆ ಬ್ಯಾಂಕಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. 2011 ಜನಗಣತಿ ಪ್ರಕಾರ ಐಹೊಳೆ ಗ್ರಾಮದಲ್ಲಿ 3,404 ಜನಸಂಖ್ಯೆ ಹೊಂದಿದೆ. ಪಟ್ಟದಕಲ್ಲು ಗ್ರಾಮದಲ್ಲಿ 2,819 ಜನಸಂಖ್ಯೆಯಿದೆ. ಆದರೆ ಎಟಿಎಂ ಸೇವೆ ಇಲ್ಲದಿರುವುದರಿಂದ ಪ್ರವಾಸಿಗರಷ್ಟೇ ಅಲ್ಲ ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ.

Advertisement

 

•ಎಚ್.ಎಚ್. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next