Advertisement

ಬ್ರಿಮ್ಸ್‌ ಸಿಬ್ಬಂದಿ ಸೇವೆ ಮುಂದುವರಿಸಲು ಆಗ್ರಹ

01:12 PM May 11, 2022 | Team Udayavani |

ಬೀದರ: ಬ್ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ 80 ಜನ ಮಹಿಳಾ ಸ್ವಚ್ಛತಾ ಕರ್ಮಿಗಳು ಮತ್ತು 16 ನೈರ್ಮಲ್ಯ ಸ್ವತ್ಛತಾ ಸಿಬ್ಬಂದಿಗಳಿಗೆ ಹಾಗೂ ಟೆಂಡರದಾರ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದಲಿತ ರಕ್ಷಣಾ ವೇದಿಕೆಯಿಂದ ನಗರದ ಬ್ರಿಮ್ಸ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.

Advertisement

ವೇದಿಕೆ ಜಿಲ್ಲಾಧ್ಯಕ್ಷ ಅಂಬಾದಾಸ ಗಾಯಕವಾಡ, ಯುವ ಘಟಕದ ಅಧ್ಯಕ್ಷ ಸೈಮನ್‌ ಚಿಲ್ಲರ್ಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಲಾಗಿದೆ. ಸುಮಾರು 2 ವರ್ಷದಿಂದ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 96 ಸ್ವತ್ಛತಾ ಕರ್ಮಿಗಳು ಮಂಜಿರಾ ಇಂಜಿನಿಯರಿಂಗ್‌ ಕನಸ್ಟ್ರಕ್ಷನ್‌ ಕಂಪನಿ ವತಿಯಿಂದ ಸೇವೆಯನ್ನು ನೀಡುತ್ತಿದೆ. ಆದರೆ, ಟೆಂಡರದಾರರಿಗೆ ಮತ್ತು ಸ್ವತ್ಛತಾ ಕರ್ಮಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಟೆಂಡರ್‌ನ್ನು ರದ್ದುಗೊಳಿಸಿರುವುದು ಖಂಡನೀಯ ಎಂದು ಬ್ರಿಮ್ಸ್‌ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ಕೋವಿಡ್‌ ವೇಳೆ ಪ್ರಾಣದ ಹಂಗನ್ನು ತೊರೆದು ರೋಗಿಗಳ ಆರೈಕೆ ಮತ್ತು ಸ್ವತ್ಛತಾ ಕೆಲಸವನ್ನು ಕಾರ್ಯನಿರ್ವಹಿಸಿದ ಈ ಬಡ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಟೆಂಡರ್‌ನಲ್ಲಿ ನಿಯಮಗಳನ್ನು ಪಾಲಿಸಿಲ್ಲ, ಟೆಂಡರ್‌ ರದ್ದುಗೊಳಿಸಲಾಗಿದೆ. ಆದರೆ, ಈ ಬಡ ಕಾರ್ಮಿಕರಿಗೆ ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೆ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದಿಂದ ಬಡ ಸ್ವಚ್ಛತಾ ಕರ್ಮಿಗಳ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next