Advertisement

WFI: ಬ್ರಿಜ್‌ಭೂಷಣ್‌ ಶಿಕ್ಷೆಗೆ ಅರ್ಹ

10:54 PM Jul 11, 2023 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಬೂಷಣ್‌ ಶಿಕ್ಷೆಗೆ ಅರ್ಹರಾಗಿದ್ದು, ಇವರು ಸಂತ್ರಸ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದಿಲ್ಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಲಯವು ಬ್ರಿಜ್‌ಭೂಷಣ್‌ಗೆ ಸಮನ್ಸ್‌ ನೀಡಬೇಕು ಮತ್ತು ಸಾಕ್ಷಿಗಳನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

Advertisement

6 ಕುಸ್ತಿ ಪಟುಗಳು ಸಲ್ಲಿಸಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಿರುವ ದಿಲ್ಲಿ ಪೊಲೀಸರು ಇತ್ತೀಚೆಗಷ್ಟೇ ಬ್ರಿಜ್‌ಭೂಷಣ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇವರ ಮೇಲಿನ ಲೈಂಗಿಕ ಕಿರುಕುಳ, ಹಿಂಸೆ ನೀಡಿರುವ ಆರೋಪಗಳ ಆಧಾರದ ಮೇಲೆ ಹೇಳುವುದಾದರೆ ಇವರು ಶಿಕ್ಷೆಗೆ ಅರ್ಹರು ಎಂಬುದನ್ನೂ ಉಲ್ಲೇಖೀಸಲಾಗಿದೆ. ಒಂದು ಪ್ರಕರಣದಲ್ಲಿ ಬ್ರಜ್‌ಭೂಷಣ್‌ ಸಿಂಗ್‌ ಪದೇಪದೆ ಕಿರುಕುಳ ನೀಡುತ್ತಲೇ ಇದ್ದರು ಎಂಬುದನ್ನೂ ಪ್ರಸ್ತಾವಿಸಲಾಗಿದೆ ಎಂದು ವರದಿಯಾಗಿದೆ.

ಸೆಕ್ಷನ್‌ 506 (ಅಪರಾಧ ಬೆದರಿಕೆ), 354 (ಮಹಿಳೆಯ ಗೌರವಕ್ಕೆ ಕುತ್ತು), 354ಎ (ಲೈಂಗಿಕ ಕಿರುಕುಳ) ಮತ್ತು 354ಡಿ (ಹಿಂಬಾಲಿಸುವುದು)ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 6 ದೂರುಗಳಲ್ಲಿ 2 ದೂರುಗಳು ಗಂಭೀರವಾಗಿದ್ದು, ಇದರಂತೆ 5 ವರ್ಷಗಳ ಜೈಲು ಶಿಕ್ಷೆಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next