Advertisement
ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ, ಉಪ ಕಾರಾಗೃಹ ಹುಬ್ಬಳ್ಳಿ, ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂಧಿಗಳ “ಕಲಿಕೆಯಿಂದ ಬದಲಾವಣೆ’ಗಾಗಿ ಮೂಲ ಸಾಕ್ಷರತೆ ಹಾಗೂ ಕಲಿಕಾ ಬೋಧನಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಜ್ವಲಗೊಳಿಸುತ್ತದೆ. ಅಲ್ಲದೆ ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇದು ಬೇಕಾಗುತ್ತದೆ. ಜೀವನದ ಅನುಭವ ಜೊತೆ ಕಲಿಕೆ ಮುಖ್ಯ. ಅದಕ್ಕೆ ಮನಸ್ಸು ಮತ್ತು ಪ್ರಯತ್ನ ಮಾಡಬೇಕು. ಕಲಿಕೆ ಬಗ್ಗೆ ಅಸಡ್ಡೆ ಭಾವನೆ ತೋರಬಾರದು. ಅಕ್ಷರ ಜ್ಞಾನ, ಶಿಕ್ಷಣವು ನೌಕರಿಗಾಗಿ ಅಲ್ಲ. ಅದು ನಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳುವುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂಧಿಗಳಿಗೆ ಕಲಿಕಾ ಬೋಧನಾ ಸಾಮಗ್ರಿಗಳನ್ನು ವಿತರಿಸಿದರು.
Related Articles
Advertisement
ಎಸ್.ಆರ್. ರಾಚಣ್ಣ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಪೊಲೀಸ್ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳುಂಕೆ, ಪಿಎಸ್‌ಐ ವೆಂಕಟೇಶ, ಜಾನಪದ ತಜ್ಞ ಡಾ| ರಾಮು ಮೂಲಗಿ ಮೊದಲಾದವರಿದ್ದರು. ರೇಷ್ಮಾ ನದಾಫ ನಿರೂಪಿಸಿದರು.