Advertisement

ಅಬ್ಬಾ ಭಾರತದ ಈ ರೈಲ್ವೆ ಬ್ರಿಡ್ಜ್ ಐಫೆಲ್ ಟವರ್ ಅನ್ನೂ ಮೀರಿಸಲಿದೆ!

06:38 PM May 03, 2017 | Sharanya Alva |

ನವದೆಹಲಿ:ಜಮ್ಮು-ಕಾಶ್ಮೀರದ ಉತ್ತರ ಭಾಗದ ಚೆನಾಬ್ ನದಿ ದಡದ ಮೇಲೆ ಅತೀ ಎತ್ತರದ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದ್ದು, ಇದು ಪ್ಯಾರಿಸ್ ನ ಐಫೆಲ್ ಟವರ್ ಗಿಂತಲೂ ಸುಮಾರು 35 ಮೀಟರ್ ಎತ್ತರವಿರಲಿದೆ ಎಂದು ಅಂದಾಜಿಸಲಾಗಿದೆ.  2019ಕ್ಕೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದು ಜಗತ್ತಿನ ಅತೀ ಎತ್ತರದ ರೈಲ್ವೆ ಸೇತುವೆಯಾಗಲಿದೆ.

Advertisement

1.3ಕಿಲೋ ಮೀಟರ್ ಉದ್ದದ ಈ ಅದ್ಭುತ ಕಾಮಗಾರಿಯ ಸೇತುವೆ ಜಮ್ಮುವಿನ ಬಕ್ಕಾಲ್ ಮತ್ತು ಶ್ರೀನಗರದ ಕೌರಿ ಪ್ರದೇಶಕ್ಕೆ ಸಂಪರ್ಕ ಸಾಧಿಸಲಿದೆ. ಸುಮಾರು 1,100 ಕೋಟಿ ರೂಪಾಯಿ ವೆಚ್ಚದಲ್ಲಿ 35 ಮೀಟರ್ ಕಮಾನಿನಾಕಾರದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ದೇಶದ ಉಳಿದೆಲ್ಲಾ ಭಾಗಗಳಿಗಿಂತಲೂ ಈ ಸೇತುವೆ ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುತ್ತಿರುವ ಅತ್ಯಂತ ಕಠಿಣ ಮಾರ್ಗವಾಗಿದೆ. ಈ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಇದು ಚೀನಾದ ಶುಬೈ ರೈಲ್ವೆ ಸೇತುವೆಯ(275 ಮೀಟರ್) ದಾಖಲೆಯನ್ನು ಮುರಿಯಲಿದೆ.

ಚೆನಾಬ್ ನದಿಯಿಂದ ಸುಮಾರು 1,178 ಅಡಿ (ಐಫೆಲ್ ಟವರ್ ಎತ್ತರ ಅಂದಾಜು 1064 ಅಡಿ) ಎತ್ತರದಲ್ಲಿ ಈ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದೆ. ಇದಕ್ಕೆ ತಗಲುವ ವೆಚ್ಚ 1,100 ಕೋಟಿ, ಇದಕ್ಕೆ 24 ಸಾವಿರ ಟನ್ ಸ್ಟೀಲ್ ಉಪಯೋಗಿಸಲಾಗುತ್ತಿದೆ. ಅಷ್ಟೇ ಅಲ್ಲ ಗಾಳಿಯ ಒತ್ತಡವನ್ನು ಅಳೆಯಲು ಅತ್ಯಾಧುನಿಕ ಸೆನ್ಸಾರ್ ಉಪಕರಣ ಕೂಡಾ ಅಳವಡಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next