Advertisement
ಕುಂದಾಪುರ: ಉಳ್ಳೂರು 74 ಗ್ರಾಮ ಹಾಗೂ ಶಂಕರನಾರಾಯಣ ಗ್ರಾಮಗಳನ್ನು ಬೆಸೆ ಯಲು, ಇರುವ ದೂರವನ್ನು ಕಡಿಮೆಗೊಳಿಸಲು ಕುಳ್ಳುಂಜೆ ಗ್ರಾಮದ ಕಿರುನದಿಗೆ ಹೆಬ್ಟಾಡಿ ಹಾಲಿಬಚ್ಚಲು ಸೇತುವೆ ಬೇಕೆಂಬ ಬೇಡಿಕೆ ನನಸಾಗಿಲ್ಲ.
Related Articles
ಉಳ್ಳೂರು ಗ್ರಾ.ಪಂ. ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಸ್ತಾವಿತ ಸೇತುವೆಯ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ವರ್ಷಗಳು ಮೂರು ಕಳೆದರೂ ಮಂಜೂರಾಗಲೇ ಇಲ್ಲ.
Advertisement
ಶಂಕರನಾರಾಯಣದಿಂದ ಹೆಬ್ಟಾಡಿಯ ತನಕ ಈಗಾಗಲೇ ಕರ್ನಾಟಕ ನೀರಾವರಿ ನಿಗಮದಿಂದ ಮಹಿಷಮರ್ದಿನಿ ದೇವಸ್ಥಾನ ಸಮೀಪ ವಾರಾಹಿ ಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಕುಂಬಾರಮಕ್ಕಿ ಜಂಕ್ಷನ್, ಹಾಲಾಡಿ ಸಿದ್ದಾಪುಯರ ರಸ್ತೆಯಲ್ಲಿ ಕೊನೆಯಾಗುತ್ತದೆ. ಈ ರಸ್ತೆಯನ್ನು ಉಪಯೋಗಿಸಿದರೆ 15 ಕಿ.ಮೀ. ದೂರದ ಸಿದ್ದಾಪುರ ಹಾಲಾಡಿಗೆ 5 ಕಿ.ಮೀ. ದೂರ ಕಡಿಮೆಯಾಗುತ್ತದೆ. ಸಿದ್ದಾಪುರ, ಉಳ್ಳೂರು, ಕುಳ್ಳುಂಜೆ, ಶಂಕರನಾರಾಯಣ, ಹಾಲಾಡಿ ಮತ್ತಷ್ಟು ಸನಿಹವಾಗುತ್ತದೆ. ಹೆಬ್ಟಾಡಿಯಿಂದ ನದಿಯ ತನಕ ಖಾಸಗಿ ಪಟ್ಟಾ ಭೂಮಿಯಲ್ಲಿ ಸುಮಾರು ನೂರು ಮೀಟರ್‌ನಷ್ಟು ಕೂಡು ರಸ್ತೆ ನಿರ್ಮಾಣವಾಗಬೇಕಾಗಿದೆ.
ಸೇತುವೆ ಬೇಡಿಕೆಕುಳ್ಳುಂಜೆ ಗ್ರಾಮದ ಹಾಲಿಬಚ್ಚಲು ಹೆಬ್ಟಾಡಿಯ ಬಳಿ ಕಿರುಸೇತುವೆ ನಿರ್ಮಾಣವಾದಲ್ಲಿ ಸಿದ್ದಾಪುರ, ಉಳ್ಳೂರು, ಶಂಕರನಾರಾಯಣ, ಕುಳ್ಳುಂಜೆ, ಹಾಲಾಡಿ ಹೀಗೆ ಐದು ಗ್ರಾಮಗಳ ಸಂಪರ್ಕ ಕೊಂಡಿಯಾಗಲಿದೆ. ನದಿಯ ಒಂದು ದಡ ಉಳ್ಳೂರು 74 ಗ್ರಾಮವಾದರೆ ಇನ್ನೊಂದು ಭಾಗ ಕುಳ್ಳುಂಜೆ ಗ್ರಾಮದಲ್ಲಿದೆ. ಎರಡೂ ಕಡೆ ನದಿದಂಡೆವರೆಗೆ ಪಂಚಾಯತ್ ರಸ್ತೆಯಿದೆ. ಸ್ವಲ್ಪ ಖಾಸಗಿ ಭೂಮಿಯಿದ್ದು ಭೂಮಾಲಕರು ಪರೋಕ್ಷವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮಂಜೂರಿಗೆ ಪ್ರಯತ್ನ
ಈ ವಾರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಈ ಪ್ರದೇಶಕ್ಕೆ ಸೇತುವೆ ಮಂಜೂರುಗೊಳಿಸುತ್ತೇನೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು ಸನಿಹದ ದಾರಿ
ಐದು ಗ್ರಾಮಗಳ ಸಂಪರ್ಕ ರಸ್ತೆಯಾದ ಹಾಲಿಬಚ್ಚಲು-ಹೆಬ್ಟಾಡಿ ಸೇತುವೆ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಬೇಡಿಕೆಯಿದೆ. ಹಾಲಿಬಚ್ಚಲು -ಹೆಬ್ಟಾಡಿ ಎಂಬಲ್ಲಿ ಈ ಸೇತುವೆ ಆದರೆ ಜನರಿಗೆ ಕೂಗಳತೆಯಲ್ಲಿ ಶಂಕರನಾರಾಯಣ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ತಲುಪಬಹುದು, ಶಂಕರನಾರಾಯಣ ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್ ಕಚೇರಿ, ಅರಣ್ಯ ಇಲಾಖೆಯನ್ನು 1.5 ಕಿ.ಮೀ. ದೂರದಲ್ಲಿ ಕ್ರಮಿಸಬಹುದು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಅಧ್ಯಕ್ಷರು, ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ – ಲಕ್ಷ್ಮೀ ಮಚ್ಚಿನ