Advertisement

Chhattisgarh: ಕಾರು – ಟ್ರಕ್‌ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

04:06 PM Dec 10, 2023 | Team Udayavani |

ರಾಯ್ ಪುರ್:  ಕಾರು – ಟ್ರಕ್‌ ನಡುವಿನ ಭೀಕರ ಅಪಘಾತದಲ್ಲಿ ವಧು – ವರ ಸೇರಿ ಐವರು ಮೃತಪಟ್ಟಿರುವ ದಾರುಣ ಘಟನೆ ಛತ್ತೀಸ್‌ಗಢದ ಬಲೂಡಾದಲ್ಲಿ ಭಾನುವಾರ (ಡಿ.10 ರಂದು) ಮುಂಜಾನೆ ನಡೆದಿದೆ.

Advertisement

ಮದುವೆ ಸಮಾರಂಭವನ್ನು ಮುಗಿಸಿ ವಧು – ವರ ಹಾಗೂ ಸಂಬಂಧಿಕರು ಕಾರಿನಲ್ಲಿ ವಾಪಾಸ್‌ ಆಗುತ್ತಿದ್ದರು. ಕಾರು ಪಂಗಢದಿಂದ ಅಕಲ್ತಾರಾ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಕಾರು ಪಕರಿಯಾ ಕಾಡಿನ ಹಾದಿಯ ಮೂಲಕ ಹೋಗುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಟ್ರಕ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ವಧು – ವರ ಸೇರಿ ಐವರು ಕೊನೆಯುಸಿರೆಳೆದಿದ್ದಾರೆ.

ಘಟನೆಯ ಬಳಿಕ ಟ್ರಕ್‌ ಚಾಲಕ ಪರಾರಿ ಆಗಿದ್ದಾನೆ. ಅಪಘಾತ ಸ್ಥಳಕ್ಕೆ ವೈದ್ಯಕೀಯ ತಂಡ ಧಾವಿಸಿದೆ.

ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next