ತಿರುವನಂತಪುರಂ: ಮದುವೆಯ ಮುನ್ನ ದಿನ ವಧುವೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಲಪ್ಪುರಂನ ಪೆರಿಂತಲ್ಮನ್ನಾನಲ್ಲಿ ಶುಕ್ರವಾರ ಸಂಜೆ (ಜ.13 ರಂದು) ನಡೆದಿದೆ.
ಪಾತೈಕ್ಕರ ಶಾಲೆಪಾಡಿ ಕಿಜಕ್ಕೆತ್ತಿಲ್‌ನ ಮುಸ್ತಫಾ – ಜೀನತ್ ದಂಪತಿಯ ಪುತ್ರಿ ಫಾತಿಮಾ ಬಾತೂರ್ (19) ಮೃತ ಯುವತಿ.
ಫಾತಿಮಾ ಅವರ ಮದುವೆ ಶನಿವಾರ (ಜ.14 ರಂದು) ಮೂರ್ಕ್ಕನಾಡ್ ನಲಿ ನಿಶ್ಚಯವಾಗಿತ್ತು. ಶುಕ್ರವಾರ ಸಂಜೆ ಮಹೆಂದಿ ಸಂಭ್ರಮದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಫಾತಿಮಾ ಕುಸಿದು ಬಿದ್ದಿದ್ದಾರೆ. ಮೆಹಂದಿ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಫಾತಿಮಾ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಆದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
Related Articles
ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.