Advertisement

ಬ್ರಜಿಲ್‌ ಪ್ರತಿಭಟನೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ

01:00 PM Jun 02, 2020 | sudhir |

ಬ್ರಸಿಲಿಯ : ಇತ್ತೀಚೆಗೆ ಬ್ರಜಿಲ್‌ನ ಸಾವೋ ಪೌಲ್‌ ಮತ್ತು ಜಾನಿರೋ ಬೀದಿಗಳಲ್ಲಿ ಅಧ್ಯಕ್ಷ ಜೈರ್‌ ಬೊಲ್ಸೊನಾರೊ ವಿರುದ್ಧ ಒಂದು ಬೃಹತ್‌ ಪ್ರತಿಭಟನೆ ಜರಗಿತು. ಇದಾದ ಕೆಲವೇ ದಿನಗಳಲ್ಲಿ ದೇಶದಲ್ಲಿ ಸೋಂಕು ಹೆಚ್ಚಾಗಿ ಫ್ರಾನ್ಸ್ ನ್ನು ಮೀರಿಸಿತು. ಸುಮಾರು 29,000 ಜನರು ಪ್ರಾಣ ಕಳೆದುಕೊಂಡರು.

Advertisement

ಇದ್ದಕ್ಕಿದ್ದಂತೆ ಸೋಂಕು ಶೀಘ್ರವಾಗಿ ಹರಡಲು ಮುಖ್ಯ ಕಾರಣ ಆ ಪ್ರತಿಭಟನೆ. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು ಯಾವುದೇ ರಕ್ಷಣಾ ಸೂತ್ರಗಳನ್ನು ಪಾಲಿಸಿರಲಿಲ್ಲ. ಸಾಮಾಜಿಕ ಅಂತರ ಕೂಡ ಪಾಲಿಸಿರಲಿಲ್ಲ.

ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಮಿಲಿಟರಿಯನ್ನು ಬಳಸಿತ್ತು. ಆದರೆ ಪ್ರತಿಭಟನೆಕಾರರು ಹಿಂದೆ ಸರಿಯದ ಕಾರಣ ಒಂದಷ್ಟು ಗೊಂದಲಗಳು ಅಲ್ಲಿ ಉಂಟಾಗಿತ್ತು. ಇದರಿಂದ ಅಧ್ಯಕ್ಷರು ಸೇನೆಗೆ ಅಶ್ರುವಾಯು ಸಿಡಿಸಿ ಪ್ರತಿಭಟನಕಾರರನ್ನು ಚದುರಿಸಲು ಆದೇಶಿಸಿದರು. ಇದರಲ್ಲಿ ಕೆಲವು ಸೋಕಿತರು ಭಾಗವಹಿಸಿದ್ದು, ಸೋಂಕು ಹಲವು ಮಂದಿಗೆ ತಗಲಿದೆ. ಬ್ರಜಿಲ್‌ನಲ್ಲಿ ಕೋವಿಡ್‌ ಸಾವಿನಾಟ ನಿರಂತವಾಗಿ ಮುಂದುವರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next