Advertisement
ಒಂದು ಸ್ತನದಲ್ಲಿ ಕ್ಯಾನ್ಸರ್ ಹೊಂದಿರುವ ಮಹಿಳೆಯರ ಇನ್ನೊಂದು ಸ್ತನದಲ್ಲಿಯೂ ಅದು ತಲೆದೋರುವ ಸಾಧ್ಯತೆ 3-4 ಪಟ್ಟು ಹೆಚ್ಚು. ಸಾಂದ್ರ ಸ್ತನಗಳು
ತಾಯಿ, ಸಹೋದರಿ ಅಥವಾ ಮಗಳು ತಮ್ಮ ಋತುಚಕ್ರ ಬಂಧಕ್ಕೆ ಮುನ್ನ ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ನೇರ ಕೌಟುಂಬಿಕ ಇತಿಹಾಸ.
ಸ್ತನಗಳಿಗೆ ಸಂಬಂಧಿಸಿದ ವಂಶವಾಹಿಗಳಲ್ಲಿ ಆನುವಂಶಿಕ ಬದಲಾವಣೆ ಹೊಂದಿರುವ ಮಹಿಳೆಯರು.
ಈ ಹಿಂದೆ ಮಾಡಿಸಿರುವ ಬಯಾಪ್ಸಿಯಲ್ಲಿಸ್ತನದ ಜೀವಕೋಶಗಳಲ್ಲಿ ಕ್ಯಾನ್ಸರೇತರ ಅಸಹಜ ಬದಲಾವಣೆ ಕಂಡುಬಂದಿರುವವರು.
ವಿಳಂಬವಾಗಿ ಶಿಶುಜನನ (35 ವರ್ಷಗಳಿಗಿಂತ ಹೆಚ್ಚು ಅಥವಾ ಮಕ್ಕಳನ್ನು ಹೊಂದದೆ ಇರುವವರು)
ಋತುಚಕ್ರ ಬೇಗನೆ ಆರಂಭವಾಗಿರುವವರು (12 ವರ್ಷಕ್ಕಿಂತ ಕಡಿಮೆ ವಯೋಮಾನ)
ವಿಳಂಬವಾಗಿ ಋತುಚಕ್ರ ಬಂಧ ಆಗಿರುವವರು (55 ವರ್ಷಕ್ಕಿಂತ ಹೆಚ್ಚು)
ಅತಿಯಾದ ದೇಹತೂಕ (ವಿಶೇಷವಾಗಿ ವಿಶಾಲವಾದ ಸೊಂಟ ಭಾಗ) (ವಿಶೇಷವಾಗಿ ಋತುಚಕ್ರ ಬಂಧದ ಬಳಿಕ ಹೆಚ್ಚು ಕ್ಯಾಲೊರಿ ಮತ್ತು ಕೊಬ್ಬು ಸೇವನೆ)
ಧೂಮಪಾನ ಮೇಲೆ ಹೇಳಲಾದ ಅಂಶಗಳನ್ನು ಹೊಂದಿರುವ ಮಹಿಳೆಯೊಬ್ಬರು ಸ್ತನದ ಕ್ಯಾನ್ಸರ್‌ಗೆ ತುತ್ತಾಗಬಲ್ಲರು ಎಂದು ಖಚಿತವಾಗಿ ಹೇಳಲಾಗದು. ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರಲ್ಲಿ ಈ ಮೇಲಿನ ಅಂಶಗಳು ಹೆಚ್ಚು
ಸಾಮಾನ್ಯವಾಗಿ ಕಂಡುಬರುತ್ತವೆ ಎಂಬುದು ಇದರ ಅರ್ಥವಾಗಿದೆ. ಮೇಲೆ ಹೇಳಲಾದಅಂಶಗಳನ್ನು ಹೊಂದಿಲ್ಲದ ಮಹಿಳೆಯರು ಕೂಡಸ್ತನ ಕ್ಯಾನ್ಸರ್‌ಗೆ ತುತ್ತಗಬಹುದು. ಹೀಗಾಗಿ ಎಲ್ಲ ಮಹಿಳೆಯರು ಕೂಡನಿಯಮಿತವಾಗಿ ಸ್ತನದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂಬುದು ತುಂಬ ಮುಖ್ಯವಾದ ಅಂಶವಾಗಿದೆ. ಸ್ತನ ಕ್ಯಾನ್ಸರನ್ನು ಅದರ ಪ್ರಾರಂಭಿಕ ಹಂತಗಳಲ್ಲಿಯೇ ಪತ್ತೆ ಮಾಡಬಹುದಾದ ಅನೇಕ ವಿಧಾನಗಳಿವೆ. ಸರಳವಾದ ವಿಧಾನವೆಂದರೆ ಸ್ತನದ ಗಾತ್ರ, ಆಕಾರ, ಸಂರಚನೆಯಲ್ಲಿ ಯಾವುದೇ ಅಸಹಜ ಬದಲಾವಣೆಗಳು ಉಂಟಾಗಿವೆಯೇ, ಗಂಟು ಅಥವಾ ಗಡ್ಡೆ ಇದೆಯೇ ಎಂಬುದನ್ನು ಸ್ವಯಂ ಪರೀಕ್ಷೆಯ ಮೂಲಕ ತಿಳಿದುಕೊಳ್ಳುವುದು. ನಿಯಮಿತವಾಗಿ ನಿಮ್ಮ ವೈದ್ಯರನ್ನು ಸಂದರ್ಶಿಸಿ ಸ್ತನದ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಆದರೆ ಮ್ಯಾಮೊಗ್ರಫಿಯಂತಹ ಆಧುನಿಕ ತಂತ್ರಜ್ಞಾನದ ಮೂಲಕ ಸ್ತನ ಕ್ಯಾನ್ಸರನ್ನು ಸ್ವಯಂ ಪರೀಕ್ಷೆಯ ಮೂಲಕ ಅಥವಾ ವೈದ್ಯರ ಮೂಲಕ ಕಂಡುಕೊಳ್ಳುವುದಕ್ಕಿಂತ ಮೂರು ವರ್ಷಗಳಷ್ಟು ಮುನ್ನವೇ ಪತ್ತೆ ಮಾಡಬಹುದಾಗಿದೆ. ಸ್ತನ ಕ್ಯಾನ್ಸರ್ ತುಂಬ ಸಣ್ಣದು ಮತ್ತು ಗುಣಪಡಿಸಬಹುದಾದ ಹಂತದಲ್ಲಿ ಇರುವಾಗಲೇ ಅದನ್ನು ಪತ್ತೆ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುವುದಕ್ಕೆ ಮ್ಯಾಮೊಗ್ರಫಿಯಷ್ಟು ಪರಿಣಾಮಕಾರಿಯಾದ ವಿಧಾನ ಇನ್ನೊಂದಿಲ್ಲ. ಮ್ಯಾಮೊಗ್ರಫಿ ಎಂದರೆ ಕಡಿಮೆ ಡೋಸ್‌ನ ಎಕ್ಸ್‌ರೇ ಮೂಲಕ ಸೆರೆಹಿಡಿಯಲಾದ ಸ್ತನದ ಚಿತ್ರಣ. 40ಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ವರ್ಷಕ್ಕೆ ಒಂದು ಬಾರಿ ಮ್ಯಾಮೊಗ್ರಫಿ ಮಾಡಿಸಿಕೊಳ್ಳುವುದನ್ನು ಶಿಫಾರಸು ಮಾಡಲಾಗಿದೆ. ಆರ್ಥಿಕ ಕಾರಣಗಳಿದ್ದರೆ ಮ್ಯಾಮೊಗ್ರಫಿಯನ್ನು ಕನಿಷ್ಠ 2 ವರ್ಷಗಳಿಗೆ ಒಮ್ಮೆ ಮಾಡಿಸಿಕೊಳ್ಳಬೇಕು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದರೆ, ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಅಥವಾ ಕೆಲವು ಪ್ರಕರಣಗಳಲ್ಲಿ ಎಂಆರ್‌ಐ – ಇವುಗಳಲ್ಲಿ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಬಗ್ಗೆ ವೈದ್ಯರ ಜತೆಗೆ ಸಮಾಲೋಚಿಸಿ ಸಲಹೆ ಪಡೆಯಬೇಕು. ಮ್ಯಾಮೊಗ್ರಫಿ ಮಾಡಿಸುವಾಗ, ವೈದ್ಯರಿಗೆ ಸ್ತನದ ಸ್ಪಷ್ಟ ಚಿತ್ರಣ ಲಭಿಸುವುದಕ್ಕಾಗಿ ಮತ್ತು ಸ್ತನಗಳಿಗೆ ವಿಕಿರಣವನ್ನು ಕಡಿಮೆ ಮಾಡುವುದಕ್ಕಾಗಿ ಉಪಕರಣದ ಎರಡು ಪ್ಲೇಟ್‌ಗಳ ನಡುವೆ ಸ್ತನಗಳನ್ನು ಮಟ್ಟಸವಾಗಿ ಒತ್ತಲಾಗುತ್ತದೆ. ಕೆಲವು ಬಾರಿ ಕೆಲವು ಮಹಿಳೆಯರಿಗೆ ಇದು ಅನನುಕೂಲವನ್ನು ಉಂಟು ಮಾಡಬಹುದು. ಆದರೆ ಈ ಅನನುಕೂಲದ ಕೆಲವು ಕ್ಷಣಗಳು ಒಂದು ಜೀವನವನ್ನು ಕಾಪಾಡುವುದಕ್ಕಿಂತ ದೊಡ್ಡದಲ್ಲವಲ್ಲ!
Related Articles
Advertisement
ಮ್ಯಾಮೊಗ್ರಾಮ್ ಪರೀಕ್ಷೆ ಮತ್ತು ಕ್ಯಾನ್ಸರ್ ಉಂಟಾಗುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕಳೆದ ನೂರಕ್ಕೂ ಹೆಚ್ಚು ವರ್ಷಗಳಲ್ಲಿ ನಡೆದಿರುವ ಅಧ್ಯಯನಗಳು ಸಾಬೀತುಪಡಿಸಿವೆ. ಆದಷ್ಟು ಬೇಗನೆ ಪತ್ತೆ ಹಚ್ಚುವುದೇ ಗುಣ ಹೊಂದುವುದರ ಕೀಲಿಕೈ ಎಂಬುದನ್ನುನಾವೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್‌ನ ಹೊರೆ ಅಗಾಧ ಪ್ರಮಾಣದಲ್ಲಿದ್ದು, ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಆದಷ್ಟು ಬೇಗನೆ ಪತ್ತೆ ಹಚ್ಚುವತ್ತ ನಾವು ನಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಬೇಕಾಗಿದ್ದು, ಮ್ಯಾಮೊಗ್ರಫಿ ಇಂತಹ ಶಕ್ತಿಶಾಲಿ ವಿಧಾನಗಳಲ್ಲಿ ಒಂದಾಗಿದೆ. ನಿಯಮಿತವಾಗಿ ಮ್ಯಾಮೊಗ್ರಫಿ ಮಾಡಿಸಿಕೊಳ್ಳುವುದರ ಮೂಲಕ ಜೀವಗಳನ್ನುಉಳಿಸಬಹುದು. ಅದು ಶತ್ರುವಲ್ಲ; ಪ್ರಾಣ ಸ್ನೇಹಿತ.
ಡಾ.ಗ್ರಿಸೆಲ್ಡಾ ನೊರೋನ್ಹಾ
ಅಸಿಸ್ಟೆಂಟ್ ಪ್ರೊಫೆಸರ್
ರೇಡಿಯಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,ಅತ್ತಾವರ