Advertisement
ಹೆಮ್ಮಾಡಿ ಸೇವಂತಿಗೆ ತಳಿಯು ಅತಿ ವಿಶಿಷ್ಟವಾಗಿದ್ದು, ತನ್ನ ಪರಿಮಳ, ಅಂದ ಹಾಗೂ ಧಾರ್ಮಿಕ ಮಹತ್ವದ ಕಾರಣಗಳಿಂದ ಹೆಮ್ಮಾಡಿ ಭಾಗದ ಬೆಳೆಗಾರರಿಗೆ ಜೀವನಾಧಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಹವಾಮಾನ ವ್ಯತ್ಯಾಸಗಳು, ವಿಪರೀತ ಮಳೆ, ಚಳಿಯಿಂದ ಈ ಬೆಳೆ ಸಂಕಷ್ಟದಲ್ಲಿದೆ. ಈ ಬಾರಿ ರೈತರು ಬೇರೆ ಕಡೆಗಳಿಂದ ಸೇವಂತಿಗೆ ಗಿಡಗಳನ್ನು ತಂದು ನೆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿಶಿಷ್ಟ ತಳಿಯೊಂದರ ಉಳಿವಿನ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ತಾವು ತತ್ಕ್ಷಣ ಈ ತಳಿಯ ಸಂರಕ್ಷಣೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಸಂಸದರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೆಮ್ಮಾಡಿ ಸೇವಂತಿಗೆ ತಳಿಯ ಗಿಡಗಳು ಮಳೆಗೆ ನಾಶವಾಗಿರುವ ಬಗ್ಗೆ, ಬೇರೆ ತಳಿಯ ಹೂವು ಬೆಳೆದ ಕುರಿತಂತೆ, ವಿಶಿಷ್ಟವಾದ ಈ ಹೆಮ್ಮಾಡಿ ಸೇವಂತಿಗೆ ತಳಿಯು ಆತಂಕದಲ್ಲಿರುವ ಬಗ್ಗೆ “ಉದಯವಾಣಿ’ಯು ಡಿ.23ರಂದು ವಿಶೇಷ ವರದಿ ಪ್ರಕಟಿಸಿತ್ತು.