Advertisement

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

10:35 AM Dec 28, 2024 | Team Udayavani |

ಮೈಸೂರು: ತನಗೆ ಮತ್ತು ಕುಟುಂಬಕ್ಕೆ ಭದ್ರತೆ ನೀಡುವಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವ ರಿಗೆ ಆರ್‌ ಟಿಐ ಕಾರ್ಯಕರ್ತ, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಬರೆದಿದ್ದಾರೆ.

Advertisement

ಮುಡಾದಲ್ಲಿನ 50:50ರ ಅನುಪಾತ ದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯರ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಈ ನಡುವೆ ಕೆಲವರು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ನನಗೆ ಮತ್ತು ಕುಟುಂಬಕ್ಕೆ ಭದ್ರತೆ ನೀಡುವಂತೆ ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಗನ್‌ ಮ್ಯಾನ್‌ ನೀಡುವಂತೆ ಮನವಿ ಮಾಡಿದ್ದರೂ ಯಾವ ಭದ್ರತೆಯನ್ನು ನೀಡಿಲ್ಲ. ಆದ್ದರಿಂದ ನನ್ನ ಮತ್ತು ಕುಟುಂಬಕ್ಕೆ ರಕ್ಷಣೆ ಬೇಕಿದ್ದು, ಸೂಕ್ತ ಭದ್ರತೆ ಒದ ಗಿಸಿ ಎಂದು ಉಲ್ಲೇಖಿಸಿದ್ದಾರೆ.

2024ರ ಆ. 18ರಂದು ಮೈಸೂರು ಪೊಲೀಸ್‌ ಆಯುಕ್ತರಿಗೆ ಗನ್‌ಮ್ಯಾನ್‌ ನೀಡು ವಂತೆ ಮನವಿ ಪತ್ರ ಸಲ್ಲಿಸಿದರೂ ನಿರಾಕರಿಸಲಾಯಿತು. ಸಿಎಂ, ಪ್ರಭಾವಿ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಸರ್ಕಾರ ನನಗೆ ಭದ್ರತೆ ನೀಡಲು ನಿರಾಕರಿಸುತ್ತಿದೆ. ನಾನು, ನನ್ನ ಕುಟುಂಬ ಸಮಾಜದಲ್ಲಿ ಯೋಗಕ್ಷೇಮ ದಿಂದ ಇರಲು ಕೇಂದ್ರ ಸರಕಾರವು ಭದ್ರತೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next