Advertisement

ಉಸಿರಾಟದ ಕಿಟ್‌ತಯಾರಿಕೆಗೆ ಮರ್ಸಿಡಿಸ್‌ ಫಾರ್ಮುಲಾ 1

10:11 AM Apr 01, 2020 | sudhir |

ಲಂಡನ್‌ : ಜಗತ್ತಿನಾದ್ಯಂತ ಕೋವಿಡ್ ರೋಗಿಗಳಿಗೆ ಬೇಕಾದ ವೆಂಟಿಲೇಟರ್‌ಗಳ ತೀವ್ರ ಅಭಾವ ಇರುವಂತೆಯೇ, ವೆಂಟಿಲೇಟರ್‌ಇಲ್ಲದೆ ಸುಲಭ ಉಸಿರಾಟಕ್ಕೆ ನೆರವು ಕಲ್ಪಿಸುವ ಹೊಸ ಮಾದರಿಯ ಉಸಿರಾಟದ ಕಿಟ್‌ ಒಂದನ್ನು ತಯಾರಿಸಲು ಫಾರ್ಮುಲಾ 1 ಸ್ಪರ್ಧೆಯಲ್ಲಿ ಭಾಗವಹಿಸುವ ಮರ್ಸಿಡಿಸ್‌ ತಂಡ ನಿರ್ಧರಿಸಿದೆ.

Advertisement

ಸಿಪಿಎಪಿ ಹೆಸರಿನ ಈ ಸಾಧನ ವೆಂಟಿಲೇಟರ್‌ ಇಲ್ಲದೆ ನೇರವಾಗಿ ಆಮ್ಲಜನಕವನ್ನು ರೋಗಿಗೆ ಒಂದು ರೀತಿಯ ಸಾಧನದ ಮೂಲಕ ಪೂರೈಸುತ್ತದೆ. ಈಗಾಗಲೇ 42 ಸಾಧನಗಳನ್ನು ಲಂಡನ್‌ನ ಆಸ್ಪತ್ರೆಗೆಗಳಿಗೆ ಮರ್ಸಿಡಿಸ್‌ ಪೂರೈಸಿದ್ದು, ಪ್ರಾಯೋಗಿಕ ಪರೀಕ್ಷೆ ಫಲಕಾರಿಯಾದಲ್ಲಿ 1 ಸಾವಿರ ಸಾಧನಗಳನ್ನು ಉತ್ಪಾದನೆ ಮಾಡಿ ಆಸ್ಪತ್ರೆಗಳಿಗೆ ಪೂರೈಸಲಿದೆ. ಇದಕ್ಕೆ ಬ್ರಿಟನ್‌ನ ವೈದ್ಯಕೀಯ ಉತ್ಪನ್ನಗಳ ಪ್ರಾಧಿಕಾರ ಈಗಾಗಲೇ ಅನುಮತಿಯನ್ನೂ ನೀಡಿದ್ದು, ಉತ್ಪನ್ನಕ್ಕೆ ಪ್ರಮಾಣಪತ್ರವನ್ನೂ ನೀಡಿದೆ.

ಹೇಗೆ ಕಾರ್ಯಾ ಚರಿಸುತ್ತದೆ?
ಸಿಪಿಎಪಿ ಸಾಧನ ಗಾಳಿ ಮತ್ತು ಆಮ್ಲಜನಕವನ್ನು ನೇರವಾಗಿ ರೋಗಿಯ ಮೂಗಿಗೆ ನೀಡುತ್ತದೆ. ಇದು ಒಂದು ಒತ್ತಡದಲ್ಲಿ ಆಮ್ಲಜನಕವನ್ನು ಪೂರೈಸುವುದರಿಂದ ಶ್ವಾಸಕೋಶ ಹಿಗ್ಗಿ, ಆಮ್ಲಜನಕವನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಒತ್ತಡ ಹೆಚ್ಚಿಸಿದಂತೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಾ ಮಾಡಬಹುದು. ಇದರಿಂದರೋಗಿ ಸುಲಭವಾಗಿ ಉಸಿರಾಡಬಹುದು. ಸಿಪಿಎಪಿ ಒತ್ತಡದ ಮೂಲಕ ಆಮ್ಲಜನಕ ಪೂರೈಸುವುದರಿಂದ ಒಂದು ಮಾಸ್ಕ್ ಬೇಕಾಗುತ್ತದೆ. ಈ ಮಾಸ್ಕ್ ಮುಖಕ್ಕೆ ಗಟ್ಟಿಯಾಗಿ (ಸೀಲ್‌ ಹಾಕಿದಂತೆ) ಹಿಡಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next