Advertisement

ಉಸಿರು ವಿಶ್ಲೇಷಕ ಇಲೆಕ್ಟ್ರಾನಿಕ್‌ ಉಪಕರಣ ಪರಿಪೂರ್ಣವಲ್ಲ: ಕೋರ್ಟ್‌

03:36 PM Aug 01, 2017 | udayavani editorial |

ಹೊಸದಿಲ್ಲಿ : ವಾಹನ ಚಾಲಕರ ಮದ್ಯ ಸೇವನೆಯನ್ನು ಪರೀಕ್ಷಿಸಲು ಪೊಲೀಸರು ಬಳಸುವ ಉಸಿರು ವಿಶ್ಲೇಷಕ ಇಲೆಕ್ಟ್ರಾನಿಕ್‌ ಉಪಕರಣಗಳು ಶೇ.100ರಷ್ಟು ಖಚಿತ ಫ‌ಲಿತಾಂಶ ನೀಡುವದಿಲ್ಲ, ತಪ್ಪುಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ದಿಲ್ಲಿ ಕೋರ್ಟ್‌ ಹೇಳಿದೆ. 

Advertisement

ಹಾಗೆ ಹೇಳುವ ಮೂಲಕ ನ್ಯಾಯಾಲಯವು ಮದ್ಯಸೇವಿಸಿ ವಾಹನ ಚಲಾಯಿಸಿದ ಆರೋಪಿಗೆ ನೀಡಲಾಗಿದ್ದ ಎರಡು ದಿನಗಳ ಜೈಲು ಶಿಕ್ಷೆಯ ತೀರ್ಪನ್ನು ತಗ್ಗಿಸಿದೆ

“ಆರೋಪಿ 31ರ ಹರೆಯದ ವಿವೇಕ್‌ ಶ್ರೀವಾಸ್ತವ ಅವರ ರಕ್ತದಲ್ಲಿ 100 ಮಿ.ಗ್ರಾಂ. ಗೆ 68.8 ಎಂಜಿ ಪ್ರಮಾಣದಲ್ಲಿ ಆಲ್ಕೋಹಾಲ್‌ ಇರುವುದು ಪತ್ತೆಯಾಗಿದೆ.ಆದುದರಿಂದ ಆತನಿಗೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ ನೀಡಿರುವ ಎರಡು ದಿನಗಳ ಜೈಲು ಶಿಕ್ಷೆಯು ಕ್ರೂರವಾಗಿದೆ’ ಎಂದು ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ಲೋಕೇಶ್‌ ಕುಮಾರ್‌ ಶರ್ಮಾ ಹೇಳಿದರು. 

ಆರೋಪಿಯ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದ ಶರ್ಮಾ ಅವರು, ದಿನದ ಕೋರ್ಟ್‌ ಕಲಾಪ ಮುಗಿಯವ ತನಕ ಕೋರ್ಟಿನಲ್ಲಿ ಕೂರುವ ಶಿಕ್ಷೆಯನ್ನು ಆರೋಪಿಗೆ ವಿಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next