ಬೆಂಗಳೂರು: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬಳು ಮಹಿಳೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಮಹಿಳೆಯರು ನಿಯಮಿತವಾಗಿ ಸ್ವಯಂ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಹಾನಿ ತಪ್ಪಿಸಬಹುದು ಎಂದು ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಅಪೊಲೊ ಕ್ಯಾನ್ಸರ್ ಕೇಂದ್ರಗಳು (ಎಸಿಸಿ)ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಹಿನ್ನೆಲೆ ನಿಯಮಿತ ಸ್ವಯಂ ಸ್ತನ ಪರೀಕ್ಷೆ ಮತ್ತು ತಪಾಸಣೆಯ ಮಹತ್ವ ಸಾರುವ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ವೇಳೆ ಕ್ಯಾನ್ಸರ್ ತಜ್ಞೆ ಡಾ.ಜಯಂತಿ ತುಮಿÕ, ಭಾರತದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ಬಳು ಮಹಿಳೆ ಸ್ತನ ಕ್ಯಾನ್ಸರ್‌ಗೆ ನಿಂದ ಬಳಲುತ್ತಿದ್ದಾರೆ ಮತ್ತು ಪ್ರತೀ 13 ನಿಮಿಷಕ್ಕೆ ಮಹಿಳೆ ಸ್ತನ ಕ್ಯಾನ್ಸರ್‌ನಿಂದಾಗಿ ಸಾವಿಗೀ ಡಾಗುತ್ತಿದ್ದಾರೆ.
ಸುಮಾರು 29 ಮಹಿಳೆ ಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿ ಸಬಹುದು. ಪ್ರತಿ ಮಹಿಳೆ ನಿಯಮಿತ ವಾಗಿ ಸ್ವಯಂ ಪರೀಕ್ಷೆಗೆ ಮುಂದಾಗಬೇಕು. ಶೀಘ್ರ ಪತ್ತೆ ಮಾಡುವುದರಿಂದ ರೋಗಿಯ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಸ್ತನದ ಲ್ಲಿನ ತೀವ್ರ ನೋವು, ಸ್ರಾವ, ಬಣ್ಣ ಬದಲಾವಣೆ ಸೇರಿದಂತೆ ಬದಲಾವಣೆ ಗಳನ್ನು ಸ್ವಯಂ ಗುರುತಿಸಿಕೊಳ್ಳಬೇಕು.
ಅಪೊಲೊ ಕ್ಯಾನ್ಸರ್ ಕೇಂದ್ರಗಳು ಭಾರತದ ಮೊದಲ ಮತ್ತು ಸಮಗ್ರ ಸಂವಾದಾತ್ಮಕ ವೆಬ್‌ಸೈಟ್ ಆಗಿದೆ ಎಂದರು. ಆಸ್ಪತ್ರೆಯ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ, ಸ್ತನ ಕ್ಯಾನ್ಸರ್ ಅನೇಕ ಮಹಿಳೆಯರನ್ನು ಬಾಧಿ ಸುವ ಕಾಯಿಲೆಯಾಗಿದ್ದು, ಇದನ್ನು ಮೊದ ಲೇ ಕಂಡುಹಿಡಿಯುವ ಮೂಲಕ ಪತ್ತೆ ಹಚ್ಚಬಹುದು ಮತ್ತು ಗುಣಪಡಿಸಬಹುದು ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಲ್ಲ ಮಹಿಳೆಯರನ್ನು ನಿಯಮಿತವಾಗಿ ಸ್ವಯಂ ಪರೀಕ್ಷೆಯನ್ನು ನಡೆಸುವಂತೆ ಹಾಗೂ ತಮ್ಮ ಸುತ್ತಮುತ್ತಲಿನ ಇತರ ಮಹಿಳೆಯರನ್ನು ಪ್ರೋತ್ಸಾಹಿಸಬೇಕು ಎಂದರು. ಸ್ತನ ಕ್ಯಾನ್ಸರ್ ಸ್ವಯಂ ಪರೀಕ್ಷೆ, ಹೆಚ್ಚಿನ ಮಾಹಿತಿಗೆ apollocancercentres.com ಭೇಟಿ ನೀಡಬಹುದು.