Advertisement

ಸ್ತನ ಕ್ಯಾನ್ಸರ್‌ನಿಯಮಿತ ತಪಾಸಣೆ ಮಾಡಿಸಿ…

07:17 PM Dec 03, 2019 | Lakshmi GovindaRaju |

ಸ್ತನ ಕ್ಯಾನ್ಸರ್‌- ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲೊಂದು. ಕ್ಯಾನ್ಸರ್‌ ಸಂಬಂಧಿತ ಸಾವುಗಳಲ್ಲಿ ಶೇ. 13.7% ರಷ್ಟು ಸ್ತನ ಕ್ಯಾನ್ಸರ್‌ನಿಂದ ಸಂಭವಿಸುತ್ತದೆ. ಈ ಕ್ಯಾನ್ಸರ್‌, ಸ್ತನ ಅಂಗಾಂಶದ ಕೋಶಗಳಿಂದ ಪ್ರಾರಂಭವಾಗುವ ಗೆಡ್ಡೆಯಿಂದ ಶುರುವಾಗುತ್ತದೆ. ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ದಶಕಗಳ ಹಿಂದೆ, ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಮಾನ್ಯ ವಯಸ್ಸು 45-55 ವರ್ಷಗಳ ನಡುವೆ ಎನ್ನಲಾಗುತ್ತಿತ್ತು. ಆದರೆ, ಅದು ಈಗ 35-45 ವರ್ಷಕ್ಕೆ ಇಳಿದಿದೆ. ಹಾಗಾಗಿ, ಈ ಕುರಿತು ಎಲ್ಲ ವಯೋಮಾನದ ಮಹಿಳೆಯರೂ ಎಚ್ಚರ ವಹಿಸಬೇಕು. ನಿಯಮಿತ ತಪಾಸಣೆಯ ಮೂಲಕ ಈ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆ ಪಡೆಯಬಹುದು.

Advertisement

ಕಾರಣಗಳೇನು?: ಧೂಮಪಾನ, ಮದ್ಯಪಾನ, ಆಧುನಿಕ ಜೀವನಶೈಲಿ, ಜಂಕ್‌ ಫ‌ುಡ್ಸ್‌ ಸೇವನೆ, ಕಡಿಮೆ ಗರ್ಭಧಾರಣೆಯ ಮಟ್ಟಗಳು, ಸ್ತನ್ಯಪಾನವನ್ನು ತಪ್ಪಿಸುವುದು, ಗರ್ಭನಿರೋಧಕ ಮಾತ್ರೆ ಸೇವನೆ, ಆನುವಂಶೀಯ ಕಾರಣ, ಹಾರ್ಮೋನ್‌ ಬದಲಾವಣೆ ಚಿಕಿತ್ಸೆ ಮುಂತಾದ ಅಂಶಗಳಿಂದ, ಸ್ತನ ಕ್ಯಾನ್ಸರ್‌ನ ಪ್ರಮಾಣ ಹೆಚ್ಚುತ್ತಿದೆ.

ಲಕ್ಷಣಗಳು: ಬೇರೆ ಬೇರೆ ಕಾರಣಗಳಿಂದ ಸ್ತನದಲ್ಲಿ ಗಂಟು, ನೋವು, ಗೆಡ್ಡೆ ಕಾಣಿಸಿಕೊಳ್ಳಬಹುದು. ಎಲ್ಲ ಬಗೆಯ ಗಂಟುಗಳೂ ಕ್ಯಾನ್ಸರ್‌ ಗೆಡ್ಡೆಯೇ ಆಗಬೇಕಿಲ್ಲ. ಸ್ತನದ ಮೇಲ್ಭಾಗ ಅಥವಾ ಹೊರಪಾರ್ಶ್ವದಲ್ಲಿ ಕಾಣಿಸಿಕೊಳ್ಳುವ ನೋವುರಹಿತ, ಕಲ್ಲಿನಂಥ ಗಡ್ಡೆಗಳನ್ನು ಕ್ಯಾನ್ಸರ್‌ನ ಲಕ್ಷಣ ಎನ್ನಬಹುದು. ಹಾಗಾಗಿ, ಸ್ತನದ ಆರೋಗ್ಯದಲ್ಲಿ ಚೂರು ಏರುಪೇರಾದರೂ ತಕ್ಷಣ ತಪಾಸಣೆ ಮಾಡಿಸಿ, ಕಾರಣ ಪತ್ತೆ ಹಚ್ಚಬೇಕು.

ತಪಾಸಣೆಯ ವಿಧಗಳು:
ಸ್ತನ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಮೂರು ವಿಧಾನಗಳಿವೆ-
1) ಕ್ಲಿನಿಕಲ್‌ ಸ್ತನ ಪರೀಕ್ಷೆ (ಸಿಬಿಇ)- ವೈದ್ಯ ಅಥವಾ ಇತರ ಆರೋಗ್ಯ ವೃತ್ತಿಪರರು ಇದನ್ನು ನಡೆಸುತ್ತಾರೆ.
2) ಸ್ತನ ಸ್ವಯಂ ಪರೀಕ್ಷೆ (ಬಿಎಸ್‌ಇ)- ಇದನ್ನು ಮಹಿಳೆ ಸ್ವತಃ ನಡೆಸಬಹುದು. ಸ್ತನದ ಚರ್ಮ ಮತ್ತು ಅಂಗಾಂಶಗಳನ್ನು ಮುಟ್ಟಿ, ರೋಗದ ಲಕ್ಷಣಗಳನ್ನು ಪತ್ತೆ Öಕ್ಷಿಚ್ಚಬಹುದು.
3) ಮ್ಯಾಮೊಗ್ರಾಮ್‌- ಇದು ಸ್ತನದ ಎಕ್ಸ್‌ರೇ, (ಕಡಿಮೆ ಮಟ್ಟದ ವಿಕಿರಣವನ್ನು ಬಳಸಲಾಗುತ್ತದೆ) ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಮತ್ತು ಹಾರ್ಮೋನುಗಳ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ.
ತಡೆಗಟ್ಟುವ ಕ್ರಮಗಳು:
1. ಸ್ತನ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ಸ್ತನ್ಯಪಾನ ಮತ್ತು ಅದರ ರಕ್ಷಣಾತ್ಮಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.
2. ಕ್ಯಾನ್ಸರ್‌ ಸಂಬಂಧಿತ ಪಠ್ಯಕ್ರಮ ಅಳವಡಿಸಿ, ಸ್ತನ ಜಾಗೃತಿ ಮತ್ತು ತಪಾಸಣೆ ವಿಧಾನಗಳನ್ನು ತಿಳಿಸಬೇಕು.
3. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆ ಹಚ್ಚಲು ಮೊಬೈಲ್‌ ಮ್ಯಾಮೊಗ್ರಫಿ ಘಟಕಗಳನ್ನು ಸ್ಥಾಪಿಸಬೇಕು.
4. ಮದ್ಯಪಾನ, ಧೂಮಪಾನ ರಹಿತ ಜೀವನಶೈಲಿ.
5. ನಿಯಮಿತ ದೈಹಿಕ ಚಟುವಟಿಕೆ.

-ಡಾ. ಕೆ.ಎಸ್‌. ಗೋಪಿನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next