Advertisement

ಬ್ಲೂವೇಲ್‌ಗೆ ಬ್ರೇಕ್‌: ಕೇಂದ್ರ ಸರಕಾರದಿಂದ ಕಠಿನ ಕ್ರಮ

07:34 AM Aug 16, 2017 | Team Udayavani |

ಹೊಸದಿಲ್ಲಿ: ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿರುವ “ಸಾವಿನ ಆಟ’ ಭಾರತಕ್ಕೂ ಕಾಲಿಟ್ಟಿರುವುದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಈಗ ಬ್ಲೂವೇಲ್‌ ಚಾಲೆಂಜ್‌ನ ಲಿಂಕ್‌ ಅನ್ನು ತತ್‌ಕ್ಷಣನೇ ತೆಗೆದುಹಾಕಿ ಎಂದು ಇಂಟರ್ನೆಟ್‌ ದಿಗ್ಗಜ ಕಂಪೆನಿಗಳಿಗೆ ಆದೇಶಿಸಿದೆ.

Advertisement

ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂ, ಮೈಕ್ರೋಸಾಫ್ಟ್ ಮತ್ತು ಯಾಹೂಗಳಿಗೆ ಈ ಸೂಚನೆ ನೀಡಿರುವ ಕೇಂದ್ರ ಇಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ, “ಬ್ಲೂವೇಲ್‌ನಿಂದಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮಾರಕ ಆಟವನ್ನು ಕೂಡಲೇ ತೆಗೆದುಹಾಕಿ’ ಎಂದು ಹೇಳಿದೆ. ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್‌ ಪ್ರಸಾದ್‌ ಅವರ ಆದೇಶದ ಮೇರೆಗೆ ಆ.11ರಂದೇ ಈ ಸೂಚನೆ ನೀಡಲಾಗಿದೆ.

50 ದಿನಗಳವರೆಗೆ ವಿವಿಧ ಅಪಾಯಕಾರಿ ಟಾಸ್ಕ್ಗಳನ್ನು ಕೊಡುವ ಈ ಆಟದಿಂದಾಗಿ ಮುಂಬಯಿ ಮತ್ತು ಪ. ಬಂಗಾಲದಲ್ಲಿ ಈಗಾಗಲೇ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಲ್ಲದೆ ಸಾವಿಗೆ ಶರಣಾಗಲು ಹೊರಟಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಈ ಘಟನೆಗಳ ಬಳಿಕ ದೇಶಾದ್ಯಂತ ಆತಂಕದ ಅಲೆ ಸೃಷ್ಟಿಯಾಗಿದ್ದು, ಈ ಆಟಕ್ಕೆ ನಿಷೇಧ ಹೇರುವಂತೆ ಕೋರಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸಹಿತ ಹಲವು ಗಣ್ಯರು ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದರು. ಈ ಗೇಮ್‌ ವಿದೇಶಗಳಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಮಕ್ಕಳನ್ನು ಬಲಿಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next