Advertisement

ನರಮೇಧಕ್ಕೆ ಕಾಯುತ್ತಿದೆಯೇ ಝೇಪೊರ್‌ಝಿಯಾ?

12:19 AM Mar 05, 2022 | Team Udayavani |

ಐರೋಪ್ಯ ರಾಷ್ಟ್ರಗಳಲ್ಲಿ ಅತಿ ದೊಡ್ಡದಾದ ಅಣುವಿದ್ಯುತ್‌ ಸ್ಥಾವರ ಎಂಬ ಹೆಗ್ಗಳಿಕೆ ಹೊಂದಿರುವ, ಉಕ್ರೇನ್‌ನ “ಝೇಪೊರ್‌ಝಿಯಾ’ವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ವಶಕ್ಕೆ ಪಡೆಯುವ ಮುನ್ನ ಸ್ಥಾವರದ ಮೇಲೆ ಶೆಲ್‌ ದಾಳಿ ನಡೆಸಲಾಗಿದೆ. ಅದರಿಂದ ಸ್ಥಾವರದ ಆವರಣದಲ್ಲಿ ಬೆಂಕಿ ಭುಗಿಲೆದ್ದಿದೆ. ಸದ್ಯಕ್ಕೇನೂ ಅಪಾಯವಿಲ್ಲ, ಆದರೆ, ಬೆಂಕಿ ಸ್ಥಾವರದ ಒಳ ನುಗ್ಗಿದರೆ ದೊಡ್ಡ ಮಟ್ಟದ ಅಪಾಯ ಎದುರಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

10 ಪಟ್ಟು ದೊಡ್ಡ ಅವಘಡ
ಅಣುಸ್ಥಾವರದಿಂದ ದೊಡ್ಡ ಮಟ್ಟದಲ್ಲಿ ವಿಕಿರಣ ಸೂಸಲಾರಂಭಿಸಿದರೆ, ಅದು 1986ರಲ್ಲಿ ಸಂಭವಿಸಿದ್ದ ಚೆರ್ನೋ ಬಿಲ್‌ ಅಣುಸ್ಥಾವರ ದುರಂತಕ್ಕಿಂತ ಹತ್ತುಪಟ್ಟು ದೊಡ್ಡ ದುರ್ಘ‌ಟನೆಗೆ ನಾಂದಿ ಹಾಡುತ್ತದೆ. ಅಲ್ಲಿನ ವಿಕಿರಣಗಳಿಂದ ಕೇವಲ ಉಕ್ರೇನ್‌ಗೆ ಮಾತ್ರವಲ್ಲ ಇಡೀ ಯೂರೋಪ್‌ ಖಂಡಕ್ಕೇ ತೊಂದರೆಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಲ್ಲಿದೆ ಈ ಸ್ಥಾವರ?
ಇದು ಉಕ್ರೇನ್‌ನ
ದಕ್ಷಿಣಕ್ಕಿರುವ ಒಡೆಸಾ ಮತ್ತು ಮರಿಯುಪೊಲ್‌ ನಗರಗಳ ಮಧ್ಯಭಾಗದಲ್ಲಿದೆ. ಸ್ಥಾವರದ ಪಕ್ಕದಲ್ಲೇ ಡಿನೈಪರ್‌ ನದಿ ಹರಿಯುತ್ತದೆ. ತುಂಬಾ ವೈವಿಧ್ಯಮಯ ಜೀವಸಂಕುಲ ಈ ಸ್ಥಾವರದ ಬಳಿಯಿದೆ. ಇಲ್ಲಿ ದುರಂತ ಸಂಭವಿಸಿದರೆ ಅದೊಂದು ದೈತ್ಯ ಅವಘಡವಾಗುತ್ತದೆ.

ಬೆಂಕಿ ಒಳಗೆ ಹಬ್ಬಿದರೆ ತೊಂದರೆ
ಸದ್ಯಕ್ಕೆ ಸ್ಥಾವರದ ಹೊರಭಾಗದಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಏನೂ ತೊಂದರೆಯಿಲ್ಲ. ಆದರೆ, ಈ ಬೆಂಕಿ ಸ್ಥಾವರದ ಒಳಗಿರುವ ನ್ಯೂಕ್ಲಿಯರ್‌ ರಿಯಾ ಕ್ಟರ್‌ನೊಳಕ್ಕೆ ನುಗ್ಗಬಾರದು. ಅಲ್ಲಿಗೆ ಬೆಂಕಿ ವ್ಯಾಪಿಸಿದರೆ, ಅದು ರಿಯಾಕ್ಟರ್‌ ಕಾರ್ಯವೈಖರಿಯನ್ನು ಹಾಳುಗೆಡ ವುತ್ತದೆ. ಅದರಿಂದ ವಿಕಿರಣ ಸೋರಿಕೆಯಾಗುತ್ತದೆ. ಜತೆಗೆೆ ಒಳಗೆ ಆವರಿಸುವ ಬೆಂಕಿಯಿಂದ ಸ್ಥಾವರದಲ್ಲಿ ರುವ ಕ್ರಿಟಿಕಲ್‌ ಕಂಟ್ರೋಲ್‌ ವ್ಯವಸ್ಥೆಯಲ್ಲೂ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿಕಿರಣಗಳು ಅನಿಯಂತ್ರಿತ ವಾಗಿ ಹೊರಗಿನ ಪರಿಸರಕ್ಕೆ ನುಗ್ಗುವಂತಾಗುತ್ತದೆ.

ವಿಕಿರಣಗಳಿಂದ
ದೇಹಕ್ಕೆ ಆಗುವ ಹಾನಿ
– ಕ್ಷಣಾರ್ಧದಲ್ಲಿ ಮಾನವನ ದೇಹದ ಜೀವಕೋಶಗಳನ್ನು ಬೇಯಿಸುತ್ತದೆ.
– ಜೀವಕೋಶಗಳಲ್ಲಿನ ಡಿರೈಬೊ ನ್ಯೂಕ್ಲಿಯಿಕ್‌ ಆ್ಯಸಿಡ್‌ (ಡಿಎನ್‌ಎ) ಅನ್ನು ಹಾಳುಗೆಡವುತ್ತದೆ.
– ಅಂಗಾಂಶ ವಿಭಜನೆ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ.
– ಕ್ಯಾನ್ಸರ್‌ಗೆ ತುತ್ತಾಗುವ ಅವಕಾಶಗಳನ್ನು ಹೆಚ್ಚು ಮಾಡುತ್ತದೆ.
– ಹೆಚ್ಚಿನ ಮಟ್ಟದಲ್ಲಿ ಅಂಗಾಂಶಗಳ ನಾಶ.
– ಅಸ್ಥಿಮಜ್ಜೆ ನಾಶವಾಗುತ್ತದೆ.
– ಮಕ್ಕಳು ದೈಹಿಕ ಊನಗಳೊಂದಿಗೆ ಜನಿಸತೊಡಗುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next