Advertisement

Mumbai ಮಳೆಯಿಂದಾಗಿ ಖಾಸಗಿ ಜೆಟ್ ಸ್ಕಿಡ್‌; 8 ಮಂದಿ ಗಾಯಗಳೊಂದಿಗೆ ಪಾರು

10:28 PM Sep 14, 2023 | Team Udayavani |

ಮುಂಬೈ :ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಭಾರೀ ಮಳೆಯ ನಡುವೆ ಖಾಸಗಿ ವಿಮಾನವೊಂದು ರನ್‌ವೇಯಿಂದ ಸ್ಕಿಡ್ ಆಗಿದ್ದು, ಲ್ಯಾಂಡ್ ಆಗುವ ಪ್ರಯತ್ನದಲ್ಲಿ ಪತನಗೊಂಡಿದೆ.

Advertisement

ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ, ಐದು ಪ್ರಯಾಣಿಕರು ಮತ್ತು ಮೂವರುಸಿಬಂದಿ (ಪೈಲಟ್, ಸಹ-ಪೈಲಟ್ ಮತ್ತು ಫ್ಲೈಟ್ ಅಟೆಂಡೆಂಟ್) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಿಎಂಸಿ ಅಧಿಕಾರಿಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿದೆ.

ಗಾಯಗಳ ಪ್ರಮಾಣ ತಿಳಿದುಬಂದಿಲ್ಲ ಆದರೆ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರನ್‌ವೇಯನ್ನು ತೆರವುಗೊಳಿಸಲಾಗಿದೆ ಮತ್ತು ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ. ಸುರಕ್ಷತಾ ತಪಾಸಣೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಅನುಮತಿ ಪಡೆಯಲಾಗಿದೆ. ಅವಘಡದ ಬಳಿಕ ರನ್‌ವೇಯನ್ನು ಸಂಕ್ಷಿಪ್ತವಾಗಿ ಮುಚ್ಚಲಾಯಿತು ಮತ್ತು ಐದು ವಿಸ್ತಾರಾ ಏರ್‌ಲೈನ್ಸ್ ವಿಮಾನಗಳನ್ನು ತಿರುಗಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next