Advertisement

ಮಕ್ಕಳಿಗೆ ಬೆಳಗ್ಗಿನ ಉಪಾಹಾರ ನೀಡುವುದರಿಂದ ಅನುಕೂಲ

03:11 PM Jul 03, 2019 | Team Udayavani |

ದೇವನಹಳ್ಳಿ : ಸಂಘ ಸಂಸ್ಥೆಗಳು ಮಕ್ಕಳ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ನೀಡುವುದರಿಂದ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಜಿಪಂ ಸದಸ್ಯ ಕೆ.ಸಿ ಮಂಜುನಾಥ್‌ ಹೇಳಿದರು.

Advertisement

ತಾಲೂಕಿನ ಕಸಬ ಹೋಬಳಿ ಉಗನವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರ ಸತ್ಯ ಸಾಯಿ ಟ್ರಸ್ಟ್‌ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಡ ಮಕ್ಕಳಿಗೆ ಅನುಕೂಲ: ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳು ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಸರಿಯಾದ ಸಮಯಕ್ಕೆ ಉಪಹಾರ ಸೇವಿಸಿ ಶಾಲೆಗೆ ಬರಲು ಕಷ್ಟ ವಾಗುವುದರಿಂದ ಶಾಲೆಯಲ್ಲಿಯೇ ಸಂಘ ಸಂಸ್ಥೆಯಿಂದ ಉಪಾಹಾರ ನೀಡುತ್ತಿರುವುದರಿಂದ ಮಕ್ಕಳ ವಿಧ್ಯಾಬ್ಯಾಸಕ್ಕೆ ಸಹಕಾರಿ ಆಗಿದೆ ಸರ್ಕಾರಿ ಶಾಲೆ ಗಳು ಖಾಸಗಿ ಶಾಲೆಗಳಿಗಿಂತಲೂ ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎಂದರು.

5 ಶಾಲೆಗಳಿಗೆ ಏಕ ಕಾಲದಲ್ಲಿ ಉಪಾಹಾರ ವ್ಯವಸ್ಥೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯಿಂದ ಸಾಮಾಜಿಕ ನಿರ್ವಹಣಾ ಅನುದಾನ (ಸಿಎಸ್‌ ಆರ್‌ )ನಲ್ಲಿ ಅರದೇಶನ ಹಳ್ಳಿ ಶಾಲೆಗೆ 6 ಕೋಟಿ ವೆಚ್ಚದಲ್ಲಿ ಹಾಗೂ ಕನ್ನ ಮಂಗಲ ಶಾಲೆಗೆ 3.5 ಕೋಟಿ ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಾಣ ವಾಗುತ್ತಿದೆ. ಅರದೇಶನ ಹಳ್ಳಿ ಶಾಲೆಯಲ್ಲಿ ಕಟ್ಟ ಡ ನಿರ್ಮಾಣ ವಾದಮೇಲೆ 80 ಇದ್ದ ಮಕ್ಕಳ ದಾಖಲಾತಿ ಸುಮಾರು 370 ಕ್ಕೆ ಏರಿಕೆ ಆಗಿದೆ. ಚಿಕ್ಕಬಳ್ಳಾಪುರ ಸತ್ಯ ಸಾಯಿ ಟ್ರಸ್ಟ್‌ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಶಾಲಾ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಮಾಡಿರುವುದಕ್ಕೆ ಜಿಪಂ ಸದಸ್ಯನಾಗಿ ಅಭಿನಂದಿಸುತ್ತೇನೆ ಈ ಸಂಸ್ಥೆಗಳು 5 ಶಾಲೆಗಳಿಗೆ ಏಕ ಕಾಲದಲ್ಲಿ ಉಪಾ ಹಾರ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸದುಪಯೋಗ ಪಡಿಸಿಕೊಳ್ಳಿ: ಗ್ರಾಪಂ ಸದಸ್ಯ ಲಕ್ಷ್ಮೀಕಾಂತ್‌ ಮಾತನಾಡಿ, ಶಿಕ್ಷಣವನ್ನು ಎಷ್ಟು ಅಭ್ಯಾಸ ಮಾಡುತ್ತೇವೋ ಅಷ್ಟೇ ಜ್ಞಾನಾರ್ಜನೆ ಆಗುತ್ತದೆ. ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಬಿಸಿ ಊಟ , ಉಚಿತ ಪಠ್ಯ ಪುಸ್ತಕ, ಸಮವಸ್ರ್ತ ಹಾಗೂ ಕ್ಷೀರ ಭಾಗ್ಯ, ಸೇರಿದಂತೆ ಹಲವು ಯೋಜನೆಗಳನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ತಾಪಂ ಮಾಜಿ ಸದಸ್ಯ ಎನ್‌.ಮಂಜುನಾಥ್‌, ಗ್ರಾಪಂ ಅಧ್ಯಕ್ಷೆ ಲೀಲಾವತಿ , ಎಂಪಿಸಿಎಸ್‌ ಅಧ್ಯಕ್ಷ ಜಿ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಆಂಜಿನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಶಾಲಾ ಮುಖ್ಯ ಶಿಕ್ಷಕ ಮುನಿ ಪಾಪಣ್ಣ, ನರಸಿಂಹ ಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next