Advertisement
ಸತತ 3 ದಿನಗಳ ಕಾಲ ಏರಿಕೆ ದಾಖಲಿಸುತ್ತಾ ಬಂದಿದ್ದ ಷೇರುಪೇಟೆಗೆ ಬುಧವಾರ ಆಘಾತವಾಗಿದೆ. ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರದ ಕಾರಣ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 24.79 ಅಂಕಗಳ ಕುಸಿತ ಕಂಡು, ದಿನಾಂತ್ಯಕ್ಕೆ 49,492.32ರಲ್ಲಿ ಕೊನೆಗೊಂಡಿತು. ನಿಫ್ಟಿ 1.40 ಅಂಕಗಳ ಅಲ್ಪ ಏರಿಕೆ ಕಂಡು, 14,564.85ರಲ್ಲಿ ವಹಿವಾಟು ಅಂತ್ಯಗೊಳಿಸಿತು.
Related Articles
Advertisement
ದೇಶದ ಎರಡನೇ ಅತೀದೊಡ್ಡ ಸಾಫ್ಟ್ವೇರ್ ರಫ್ತು ಸಂಸ್ಥೆಯಾದ ಇನ್ಫೋಸಿಸ್, 2020ರ ಡಿಸೆಂಬರ್‌ಗೆ ಅಂತ್ಯಗೊಂಡ ಮೂರನೇ ತ್ತೈಮಾಸಿಕದಲ್ಲಿ ಶೇ.16.6ರಷ್ಟು ಅಂದರೆ 5,197 ಕೋಟಿ ರೂ. ಲಾಭ ಗಳಿಸಿದೆ. ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪೆನಿಯು 4,457 ಕೋಟಿ ರೂ. ಲಾಭ ಗಳಿಸಿತ್ತು. ದಾಖಲೆ ಸಂಖ್ಯೆಯ ಒಪ್ಪಂದಗಳು ಹಾಗೂ ಖರೀದಿ ಪ್ರಕ್ರಿಯೆಯಿಂದಾಗಿ ಲಾಭದ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಡಿಸೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಇನ್ಫಿಯ ಕ್ರೋಡೀಕೃತ ಆದಾಯ 25,927 ರೂ. ಅಂದರೆ ಶೇ.12.3ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ಅದು 23,092 ರೂ. ಆಗಿತ್ತು.