ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಗೇಟ್‌ಗೆ ಅಳವಡಿಸಿದ್ದ ಬೀಗ ತೆರೆಯಲಾಗಿಲ್ಲ. ಮಂಗಳವಾರದಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಮಧ್ಯೆ ಸೋಮವಾರ ಪ್ರವಾಸಿಗರು ಕೂಡ ದೊಡ್ಡ ಮಟ್ಟದಲ್ಲಿ ಜೋಗಕ್ಕೆ ಬಂದಿರಲಲ್ಲ. ಆದರೆ, ಬೆರಳೆಣಿಕೆಯಷ್ಟು ಪ್ರವಾಸಿಗರು ಆಗಮಿಸಿ ನಿರಾಸೆಯಿಂದ ತೆರಳಿದರು. ಸಾಗರ, ಸಿದ್ದಾಪುರ, ಹಾವೇರಿ ಭಾಗಗಳಿಂದ ಸೋಮವಾರ ಕೆಲವು ಯುವಕರು ದ್ವಿಚಕ್ರವಾಹನಗಳಲ್ಲಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸೋಮವಾರ ಒಂದು ದಿನದ ಮಟ್ಟಿ ಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಶಿನ್ ಮುಂತಾದವನ್ನು ಭಾನುವಾರ ಜೋಗಕ್ಕೆ ತಲುಪಿಸಲಾಗಿದೆ. ಫಾಗಿಂಗ್, ಸ್ಯಾನಿಟೈಸೇಷನ್ ಮುಂತಾದ ಅಗತ್ಯ ಕ್ರಮಗಳ ನಂತರ ಪ್ರವೇಶಾವಕಾಶವನ್ನು ಒಂದು ದಿನ ನಿರ್ಬಂಧಿ ಸುವುದು ಸೂಕ್ತ ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ. ಮಾಸ್ಕ್ ಧರಿಸುವ ಮತ್ತು ಭೌತಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಲೇಬೇಕು.ರಾಮಕೃಷ್ಣ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ