Advertisement
“ಪಲ್ಲವಿ ಅನುಪಲ್ಲವಿ’, “ಅನುರೂಪ’ ಎಂಬ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಮಧುಸೂದನ್‌ಗೆ ಈ ಚಿತ್ರವೂ ಸಕ್ಸಸ್ ಕೊಡುತ್ತೆ ಎಂಬ ವಿಶ್ವಾಸವಿದೆಯಂತೆ. “ಇದು ಎರಡು ವರ್ಷಗಳಲ್ಲಿ ನಡೆಯೋ ಪ್ರೇಮಕಥೆ. ಹುಡುಗ -ಹುಡುಗಿ ನಡುವೆ ಪ್ರೀತಿ ಬೆಸೆದು, ಬ್ರೇಕ್ ಆದಾಗ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ. ನಾಯಕಿಗೆ ಇಲ್ಲಿ ಎರಡು ಶೇಡ್ ಪಾತ್ರವಿದೆ. ಅವಳ ವರ್ತನೆಯಿಂದ ನಾಯಕನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ಎನ್ನುವುದನಿಲ್ಲಿ ಸೂಕ್ಷ್ಮವಾಗಿ ಹೇಳಿದ್ದೇನೆ. ಇಲ್ಲಿ ನೈಜತೆಗೆ, ವಾಸ್ತವಕ್ಕೆ ಹತ್ತಿರ ಇರುವಂತಹ ಅಂಶಗಳಿವೆ. ಇನ್ನುಳಿದಂತೆ ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿವೆ. ಮೊದಲ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ’ ಅಂದರು ಮಧುಸೂದನ್.
Related Articles
“ನನ್ನ ಆ 40 ವರ್ಷಗಳ ಸಿನಿಮಾ ಜರ್ನಿಯಲ್ಲಿ “ಈ ಎರಡು ವರ್ಷಗಳು’ ಬಹಳ ಮುಖ್ಯ ಎಂದು ಮಾತಿಗಿಳಿದರು ಹಿರಿಯ ನಟ ರಾಮಕೃಷ್ಣ. “ನನಗಿಲ್ಲಿ ಮಜವಾದ ಪಾತ್ರವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ ಅಂದರು ಅವರು.
Advertisement
ಅನೂಪ್ ಸೀಳಿನ್ ಇಲ್ಲಿ ಐದು ಹಾಡುಗಳನ್ನು ಕೊಟ್ಟಿದ್ದಾರಂತೆ. ಸಾಕಷ್ಟು ಕೋಪ ಮಾಡಿಕೊಂಡರೂ, ನಿರ್ದೇಶಕರು ತಾಳ್ಮೆಯಿಂದಲೇ ಒಳ್ಳೇ ಹಾಡುಗಳನ್ನು ತೆಗೆಸಿದ್ದಾರೆ. ಗೆಳೆಯ ಅರಸು ಅಂತಾರೆ ಅವರ ಸಾಹಿತ್ಯ ಕಥೆಗೆ ಪೂರಕವಾಗಿದೆ ಅನ್ನುತ್ತಾರೆ ಅನೂಪ್.
ಗೀತರಚನೆಕಾರ ಅರಸು ಅಂತಾರೆ, ಕ್ಯಾಮೆರಾಮೆನ್ ರವಿಕಿಶೋರ್, ಸಂಕಲನಕಾರ ಅಕ್ಷಯ್ ಇತರರು ಮಾತಾಡುವ ಹೊತ್ತಿಗೆ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ತೆರೆಬಿತ್ತು.