Advertisement

ಉಡುಪಿ: ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್, ಕೋಮು ಸೌಹಾರ್ದತೆಗೆ ಆದ್ಯತೆ; ನೂತನ ಎಸ್ಪಿ

02:08 PM Aug 17, 2022 | Team Udayavani |

ಉಡುಪಿ: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್‌ ಮಚ್ಚೀಂದ್ರ ಹಾಕೆ ಅವರು, ಉಡುಪಿ ಎಸ್ಪಿಯಾಗಿದ್ದ ಎನ್‌. ವಿಷ್ಣುವರ್ಧನ್‌ ಕಡತ  ಹಸ್ತಾಂತರಿಸುವ ಮೂಲಕ ಬುಧವಾರ ಅಧಿಕಾರ ಸ್ವೀಕರಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಅಕ್ಷಯ್‌ ಮಚ್ಚೀಂದ್ರ ಹಾಕೆ, ಉಡುಪಿ ಜಿಲ್ಲೆಯ ಬಗ್ಗೆ ಹೆಮ್ಮೆ ಇದೆ. ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಸಾಂಸ್ಕೃತಿಕವಾಗಿ ಹೆಸರುಗಳಿಸಿದೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ,  ಕಾನೂನು ಸುವ್ಯವಸ್ಥೆ ಕಾಪಾಡುವುದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಮೊದಲ ಆದ್ಯತೆ ಆಗಿದೆ ಎಂದರು.

2015 ರ‌ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿರುವ ಅಕ್ಷಯ್ ಅವರು  2011 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮೂಲತಃ ಮಹಾರಾಷ್ಟ್ರ ದ ನಾಸಿಕ್ ಜಿಲ್ಲೆಯವರು. ಕಳೆದ ಎರಡೂವರೆ ವರ್ಷಗಳಿಂದ ಚಿಕ್ಕಮಗಳೂರಿನ ಎಸ್ಪಿಯಾಗಿದ್ದ ಅಕ್ಷಯ್ ಈ ಹಿಂದೆ ಗುಲ್ಬರ್ಗಾ ದಲ್ಲಿ ಎಎಸ್ಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಲಿಂಗಸೂಗುರು: ಕೊಡಲಿಯಿಂದ ಪತ್ನಿ ಕೊಲೆಗೈದು ಮಕ್ಕಳೊಂದಿಗೆ ಠಾಣೆಗೆ ಬಂದು ಶರಣಾದ ಪತಿ!

Advertisement

Udayavani is now on Telegram. Click here to join our channel and stay updated with the latest news.

Next