Advertisement

ಅನ್ಯಕೆಲಸಕ್ಕೆ ಬ್ರೇಕ್‌: ಸಚಿವೆ

06:00 AM Dec 12, 2018 | |

ಸುವರ್ಣಸೌಧ (ವಿಧಾನಸಭೆ): ಅಂಗನವಾಡಿ ಕಾರ್ಯಕರ್ತೆಯರು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಿರ್ದಿಷ್ಟ ಕೆಲಸದಲ್ಲಷ್ಟೇ ತೊಡಗಿಸಿಕೊಂಡು ಅನ್ಯ ಕೆಲಸ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಇತರೆ ಕಾರ್ಯಗಳಿಗೆ ನಿವೃತ್ತ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವೆ ಡಾ.ಜಯಮಾಲಾ ಹೇಳಿದರು.

Advertisement

ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 3000ರೂ. ಹಾಗೂ ರಾಜ್ಯ ಸರ್ಕಾರದಿಂದ 5000ರೂ. ಸೇರಿ ಒಟ್ಟು 8000 ರೂ. ಗೌರವ ಧನ ನೀಡಲಾಗುತ್ತಿದೆ. ಸಹಾಯಕರಿಗೆ  4,750 ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್‌ನ ಶಾಸಕ ತನ್ವೀರ್‌ಸೇs…, ಕೇಂದ್ರ ಸರ್ಕಾರವು ಈ ಹಿಂದೆ ಶೇ.90ರಷ್ಟು ಗೌರವಧನ ಭರಿಸುತ್ತಿತ್ತು. ಇದೀಗ 50: 50ರ ಅನುಪಾತ ನಿಗದಿಪಡಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ  ಹೊರೆಯಾಗಿದೆ ಎಂದು ಹೇಳಿದರು.

ಬಳಿಕ ಸುರೇಶ್‌ ಕುಮಾರ್‌, ಅಂಗನವಾಡಿ ಕಾರ್ಯಕರ್ತೆಯರು ನಿರ್ದಿಷ್ಟ ಉದ್ದೇಶದ ಕಾರ್ಯಗಳನ್ನಷ್ಟೇ ನಿರ್ವಹಿಸಿದರೆ ಮಾತೃಪೂರ್ಣ, ಮಾತೃಶ್ರೀ, ಭಾಗ್ಯಲಕ್ಷ್ಮೀ, ಶಿಶು- ಮಕ್ಕಳಿಗೆ ನಾನಾ ಲಸಿಕೆ ಹಾಕುವ ಕಾರ್ಯಕ್ರಮ, ಸಮೀಕ್ಷೆಗಳು, ಶೌಚಾಲಯ
ನಿರ್ಮಾಣ ಮೇಲ್ವಿಚಾರಣೆ, ಬಿಪಿಎಲ್‌ ಕಾರ್ಡ್‌ ಸರ್ವೇ, ಪಲ್ಸ್‌ ಪೊಲಿಯೋ ಲಸಿಕೆ ಕಾರ್ಯಕ್ರಮ, ಇಂದ್ರಧನುಷ್‌ ಇತರೆ
ಯೋಜನೆಗಳನ್ನು ಜಾರಿಗೊಳಿಸುವವರು ಯಾರು? ಇಷ್ಟೆಲ್ಲಾ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ
ಕೇವಲ ಗೌರವ ಧನ ನೀಡುವುದು ಸೂಕ್ತವೇ ಎಂದು ಪ್ರಶ್ನಿಸಿದರು.

59,296 ಮಕ್ಕಳಿಗೆ ಅಪೌಷ್ಟಿಕತೆ: ರಾಯಚೂರು ಜಿಲ್ಲೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ 59,296 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಎಂಟು ತಾಲೂಕಿನ ಪೈಕಿ ಮಾನ್ವಿ, ಸಿರವಾರ ತಾಲೂಕಿನಲ್ಲಿ 13,731 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಬಿಜೆಪಿಯ ಶಿವನಗೌಡ ನಾಯಕ ಪ್ರಶ್ನೆಗೆ ಉತ್ತರ ನೀಡಿದ ಸಚಿವೆ ಜಯಮಾಲಾ, ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ 59,296 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದ್ದು, ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next