Advertisement
ಇಳವಾ ಬಳಿ ಕಾಳಿ ನದಿಯಲ್ಲಿ ರ್ಯಾಪಿಡ್ ವಾಟರ್ ಬೋಟಿಂಗ್ ನಡೆವ ಸ್ಥಳಕ್ಕೆ ಆಗಮಿಸಿದ ಪ್ರವಾಸಿಗರು ಜಲ ಸಾಹಸ ಕ್ರೀಡೆಗಳ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ವಾಪಾಸ್ ಆಗಿದ್ದಾರೆ. ರಜಾ ದಿನಗಳಲ್ಲಿ ವಾಟರ್ ಸ್ಪೋರ್ಟ್ಸ್ ಮಾಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಾಡಿಕೆ. ಅಲ್ಲದೇ ಕೋವಿಡ್ ನಂತರದ ದಿನಗಳಲ್ಲಿ ವಾಟರ್ ಸ್ಪೋರ್ಟ್ಸ್ ಕಾಳಿ ನದಿಯಲ್ಲಿ ಗರಿಗೆದರಿದ್ದು, ಸಾವಿರಾರು ಪ್ರವಾಸಿಗರು ಆಗಮಿಸಲು ಆರಂಭಿಸಿದ್ದರು.
Related Articles
Advertisement
ರಿವರ್ ರ್ಯಾಪಿಡ್ ರಾಫ್ಟ್ ಆಯೋಜಿಸುವವರ ಪೈಕಿ ಒಬ್ಬರು ಮಾಡಿದ ತಪ್ಪಿಗೆ ಕಾಳಿ ನದಿಯಲ್ಲಿ ನಡೆಯುವ ಎಲ್ಲ ಜಲ ಸಾಹಸ ಚಟುವಟಿಕೆ ನಿಲ್ಲಿಸುವುದು ಸರಿಯಲ್ಲ. ಎಲ್ಲ ಜಲ ಸಾಹಸ ಮತ್ತು ರ್ಯಾಪಿಡ್ ವಾಟರ್ ಬೋಟಿಂಗ್ ಆಯೋಜಕರ ಕಾರ್ಯ ಚಟುವಟಿಕೆ ನಿಲ್ಲಿಸಿ ಪ್ರವಾಸೋದ್ಯಮ ಚಟುವಟಿಕೆಗೆ ತಡೆ ನೀಡುವುದು ಸರಿಯಲ್ಲ.
ಪ್ರವಾಸೋದ್ಯಮವನ್ನು ಅತ್ಯಂತ ಕಾಳಜಿಯಿಂದ ನಡೆಸಿ ಎಂದು ತಾಕೀತು ಮಾಡಲಿ ಎಂಬ ಮಾತು ಕೇಳಿ ಬಂದಿದೆ. ದಾಂಡೇಲಿ, ಜೋಯಿಡಾಕ್ಕೆ ಬರುವ ಪ್ರವಾಸಿಗರು ಜಲಸಾಹಸ ಮಾಡಲು ವಾಟರ್ ಬೋಟಿಂಗ್ ಚಟುವಟಿಕೆಗಾಗಿ ಗಣೇಶ ಗುಡಿ ಸುತ್ತಮುತ್ತ ಆಗಮಿಸುವುದು ಸಹಜ. ಈಗ ತಾನೇ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಕ್ರಮಬದ್ಧವಾಗಿ ರ್ಯಾಪಿಡ್ ವಾಟರ್ ಬೋಟಿಂಗ್: ಕಾಳಿ ನದಿಯಲ್ಲಿ ಇಳವಾ ಬಳಿ ಇರುವ ವೈಟ್ ವಾಟರ್, ಬೈಸನ್, ಹಾರ್ನಬಿಲ್ ರೆಸಾರ್ಟ್‌ಗಳು ಕ್ರಮಬದ್ಧವಾಗಿ ಜಲ ಸಾಹಸ ಚಟುವಟಿಕೆಗಳನ್ನು ನಡೆಸುತ್ತಿವೆ. ವೈಟ್ ವಾಟರ್ ಬಂದರು ಇಲಾಖೆಯಿಂದ ಬೋಟಿಂಗ್‌ಗೆ ಅನುಮತಿ ಪಡೆದಿದೆ. ರ್ಯಾಪಿಡ್ ವಾಟರ್ ಬೋಟಿಂಗ್ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಗೂ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಹಾಕಿಸಿಯೇ ರ್ಯಾಪಿಡ್ ಬೋಟಿಂಗ್ ಮಾಡಿಸುತ್ತದೆ. ತನ್ನ ಜಮೀನು ವ್ಯಾಪ್ತಿಯ ನದಿ ಪಾತ್ರದ 300 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಜಲ ಕ್ರೀಡೆಗಳನ್ನು ನಡೆಸುತ್ತದೆ.
ಅಲ್ಲದೆ ನುರಿತ ಈಜುಗಾರರು ಹಾಗೂ ಬೋಟ್ ನಡೆಸುವ ಟ್ರೆçನಿಗಳನ್ನು ಹೊಂದಿದೆ. 3 ಕಿ.ಮೀ.ನಿಂದ ಹಾಗೂ ಅದಕ್ಕೂ ದೂರದ ರಾಫ್ಟಿಂಗ್ ಮಾಡುವುದು ಜಂಗಲ್ ಲಾಡ್ಜ್ಸ್‌ನವರು ಮಾತ್ರ. ಗಣೇಶ ಗುಡಿಯಿಂದ ಮಾವಳಂಗಿ ತನಕ ಮೂರು ತಾಸು ರಾಫ್ಟಿಂಗ್ ಕ್ರೀಡೆಯನ್ನು ಸಣ್ಣಪುಟ್ಟ ರೆಸಾಟ್ ìನವರು ಮಾಡುತ್ತಿಲ್ಲ ಎಂಬುದು ಸ್ಥಳೀಯ ರೆಸಾರ್ಟ್ ಮಾಲಿಕರ ವಾದ.
ಈತನ್ಮಧ್ಯೆ ವೈಟ್ ವಾಟರ್ ರೆಸಾರ್ಟ್ ಮಾಲೀಕರಾದ ನೋಬರ್ಟ್ ಎಫ್. ಮೆನೆಜಸ್ ಅವರು ರಾಜ್ಯ ಹೈಕೋರ್ಟ್ ಧಾರವಾಡ ಪೀಠದ ಪ್ರತಿಬಂಧಕಾಜ್ಞೆಯ ಆದೇಶ ಪ್ರತಿಯನ್ನು ಜೋಯಿಡಾ ತಹಶೀಲ್ದಾರರ ಗಮನಕ್ಕೆ ತಂದಿದ್ದಾರೆ. ಕಾನೂನು ಬದ್ಧವಾಗಿ ಜಲ ಸಾಹಸ ಕ್ರೀಡೆಗಳನ್ನು, ರ್ಯಾಪಿಡ್ ವಾಟರ್ ಬೋಟಿಂಗ್ ನಡೆಸುತ್ತಿದ್ದೇವೆ. ಈ ಸಂಬಂಧದ ಪತ್ರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಮುಖ್ಯಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸಿಪಿಐ ಜೋಯಿಡಾ, ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್‌ಗೆ ಸಹ ಈ ಮೇಲ್ ಮೂಲಕ ಕಳುಹಿಸಿದ್ದಾರೆ.