Advertisement
ಕರಾವಳಿ ಪ್ರಾಂತ್ಯದ ಮನೆಗಳ ಹಿತ್ತಿಲು ಅಥವಾ ತೋಟಗಳಲ್ಲಿ ಇದನ್ನು ನೋಡಬಹುದು. ತುಳು ಭಾಷೆಯಲ್ಲಿ ಜೀಗುಜ್ಜೆ ಅಥವಾ ದೀಗುಜ್ಜೆ ಎಂದು ಸಂಬೋಧಿಸುತ್ತಾರೆ. ದಕ್ಷಿಣ ಕನ್ನಡ, ಕಾರಾವರ, ಉತ್ತರ ಕರ್ನಾಟಕ, ಧಾರವಾಡಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ದೀಗುಜ್ಜೆಯಲ್ಲಿ ತೇವಾಂಶ, ಸಸಾರಾಜನಕ, ಮೇದಸ್ಸು, ಶರ್ಕರ, ನಾರು, ಖನಿಜ ಅಂಶಗಳಿವೆ. ಪೂರ್ಣವಾಗಿ ಬಲಿತಕಾಯಿ ಹಾಗೂ ಬೀಜಗಳನ್ನು ಬಳಸುತ್ತಾರೆ.
ಉಷ್ಣವಲಯದ ಬೆಳೆ ಆಗಿರುವುದರಿಂದ ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದ ತನಕವೂ ಸಾಗುವಳಿ ಮಾಡಲು ಸಾಧ್ಯವಿದೆ. ಬೆಚ್ಚಗಿನ ಹಾಗೂ ಕೆಳಮಟ್ಟದ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. 19 ರಿಂದ 30 ಸೆ.ಉಷ್ಣಾಂಶ, 200 ರಿಂದ 250 ಸೆಂ.ಮೀ. ಮಳೆ ಹಾಗೂ 70 ರಿಂದ 80 ಆರ್ದತೆ ಇರುವ ಪ್ರದೇಶಗಳಲ್ಲಿ ನಾಟಿಗೆ ಅನುಕೂಲಕರ. ಫಸಲಿನ ಹಿತದೃಷ್ಟಿಯಿಂದ ಶೀತ ಪ್ರದೇಶ ಮತ್ತು ಬೆಟ್ಟ ಗುಡ್ಡ ಪ್ರದೇಶಗಳು ಅಷ್ಟು ಸೂಕ್ತವಲ್ಲ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ.
Related Articles
ಪದಾರ್ಥ ಹಾಗೂ ವಿವಿಧ ಖಾದ್ಯಗಳ ತಯಾರಿಕೆಗೆ ಜೀಗುಜ್ಜೆ ಹೆಚ್ಚಾಗಿ ಬಳಸ್ಪಡುವ ಕಾರಣ ಮಾರುಕಟ್ಟೆಗಳಲ್ಲಿ ಇದಕ್ಕೆ ಬೇಡಿಕೆಯೂ ಇದೆ. ಆದರೆ ದಕ್ಷಿಣ ಕನ್ನಡದಲ್ಲಿ ಇದನ್ನು ಆದಾಯದ ದೃಷ್ಟಿಯಿಂದ ಬೆಳೆಯುವುದು ಕಡಿಮೆ. ಮನೆ ಖರ್ಚಿಗೆ ಆದಿತು ಎಂಬ ಕಾರಣಕ್ಕೆ ಗಿಡ ನೆಡುತ್ತಾರೆ. ಇದನ್ನು ಉಪ ಬೆಳೆಯಾಗಿ ಬೆಳೆದರೆ ಒಂದಷ್ಟು ಆದಾಯವೂ ದೊರೆಯಬಹುದು. ತೋಟಗಾರಿಕಾ ಇಲಾಖೆಯಿಂದಲೂ ಈ ಸಸಿ ದೊರೆಯುವುದರಿಂದ ಉತ್ತಮ ಗುಣಮಟ್ಟದ ಗಿಡ ನಾಟಿ ಮಾಡಬಹುದು. ಅಡಿಕೆ, ತೆಂಗು, ರಬ್ಬರ್ ತೋಟ ಮಧ್ಯೆ ನಾಟಿ ಇದನ್ನು ಮಾಡುವಂತಹದಲ್ಲ. ದಿವಿ ಹಲಸು ರೆಂಬೆ, ಕೊಂಬೆ ಚಾಚಿಕೊಂಡು ಬೆಳೆಯುವ ಕಾರಣ, ವಿಸ್ತಾರವಾದ ಜಾಗವೂ ಬೇಕು.
Advertisement