Advertisement
ತಾಲೂಕಿನಲ್ಲಿ ಒಟ್ಟು 18 ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಂದ ಎಕರೆಗೆ ತಲಾ 5 ಕ್ವಿಂಟಲ್ ತೊಗರಿ ಖರೀದಿಸುವಂತೆ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಆದೇಶದಂತೆ ಖರೀದಿ ಮಾಡಿದ್ದೇವೆ ಎಂದು ಖರೀದಿ ಕೇಂದ್ರದವರು ಹೇಳುತ್ತಾರೆ. ಆದರೆ ತಾಲೂಕಿನಾದ್ಯಂತ ಶೇ. 10ರಷ್ಟು ತೊಗರಿಯೂ ಖರೀದಿಯಾಗಿಲ್ಲ. ಉಳಿದ 70ರಿಂದ 80ರಷ್ಟು ರೈತರು ತೊಗರಿ ಮಾರಾಟ ಮಾಡಿಲ್ಲ. ಈ ನಡುವೆ ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರಗಳ ಎದುರು ಚೀಲ ಇಟ್ಟುಕೊಂಡು ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
ಹಸರಗುಂಡಗಿ ಖರೀದಿ ಕೇಂದ್ರ: 550 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 260 ರೈತರಿಂದ 2250 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಭೈರಾಮಡಗಿ ಖರೀದಿ ಕೇಂದ್ರ: 1745 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 423 ರೈತರಿಂದ 3750 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ.
ಗೊಬ್ಬೂರ(ಬಿ) ಖರೀದಿ ಕೇಂದ್ರ: 878 ರೈತರು ನೋಂದಣಿ ಮಾಡಿಸಿದ್ದಾರೆ. 193 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ದೇಸಾಯಿ ಕಲ್ಲೂರ ಖರೀದಿ ಕೇಂದ್ರ: 750 ರೈತರು ನೋಂದಣಿ ಮಾಡಿಸಿದ್ದಾರೆ. 230 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಮಾಶಾಳ ಖರೀದಿ ಕೇಂದ್ರ: 1067 ರೈತರು ನೋಂದಣಿ ಮಾಡಿಸಿದ್ದಾರೆ. ಇಲ್ಲಿಯವರೆಗೆ 163 ರೈತರಿಂದ 2870 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಚಿಣಮಗೇರಾ ಖರೀದಿ ಕೇಂದ್ರ: 718 ರೈತರು ನೋಂದಣಿ ಮಾಡಿಸಿದ್ದಾರೆ. 269 ರೈತರಿಂದ 4700 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ರೇವೂರ(ಬಿ) ಖರೀದಿ ಕೇಂದ್ರ: 1825 ರೈತರು ನೋಂದಿಣಿ ಮಾಡಿಸಿದ್ದಾರೆ. 316 ರೈತರಿಂದ ಒಟ್ಟು 5500 ಕ್ವಿಂಟಲ್ ಗರಿ
ಖರೀದಿಸಲಾಗಿದೆ.
ಮಣೂರ ಖರೀದಿ ಕೇಂದ್ರ: 727 ರೈತರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 165 ರೈತರಿಂದ 2750 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಖರೀದಿ ಕೇಂದ್ರಗಳ ಲಭ್ಯ ಮಾಹಿತಿ ಪ್ರಕಾರ 12560 ರೈತರ ಆನ್‌ಲೈನ್ ನೋಂದಣಿಯಾಗಿದೆ. ಈ ಪೈಕಿ 2897 ರೈತರ ತೊಗರಿ ಖರೀದಿಸಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿಯಾದ ಇನ್ನೂ 9663 ರೈತರ ತೊಗರಿ ಖರೀದಿಯಾಗಿಲ್ಲ. ಸದ್ಯ ತೊಗರಿ ಖರೀದಿ ಸ್ಥಗಿತಗೊಳಿಸಿದ್ದರಿಂದ ತಾಲೂಕಿನ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ತೊಗರಿ ಖರೀದಿ ಕೇಂದ್ರ ಪುನಾರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತೊಗರಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ
Related Articles
Advertisement