Advertisement

ಕೋವಿಡ್ ಮುಗಿಯಿತೆಂದು ಆಪರೇಷನ್‌ ಮೂಲಕ ಕಿವಿ ಕತ್ತರಿಸಿಕೊಂಡ ಮಾನವ ಸೈತಾನ್‌ !

08:57 PM Apr 14, 2022 | Team Udayavani |

ಬ್ರೆಜೀಲಿಯಾ: ಕೊರೊನಾ ಸಾಂಕ್ರಾಮಿಕ ಅಂತ್ಯವಾಗುವ ಹಂತದಲ್ಲಿದೆ ಎಂದು ಪಾರ್ಟಿ ಮಾಡಿ, ಮಾಸ್ಕ್ ಕತ್ತರಿಸಿ ಖುಷಿ ಪಡುವವರನ್ನು ನೋಡಿರುತ್ತೀರಿ. ಆದರೆ ಈ ಒಬ್ಬ ವ್ಯಕ್ತಿ, ಕೊರೊನಾ ಅಂತ್ಯದ ಖುಷಿಯಲ್ಲಿ ಮಾಸ್ಕ್ ತೊಡಲು ಅತ್ಯವಶ್ಯಕವಾಗಿದ್ದ ಕಿವಿಗಳನ್ನೇ ಕತ್ತರಿಸಿದ್ದಾರೆ!

Advertisement

“ಮಾನವ ಸೈತಾನ್‌’ ಎಂದೇ ಕರೆಸಿಕೊಳ್ಳುವ ಬ್ರೆಜಿಲ್‌ನ ಪ್ರಡ್ಡೋ ಈ ರೀತಿ ಕಿವಿಗಳನ್ನು ಕತ್ತರಿಸಿಕೊಂಡಿರುವ ವ್ಯಕ್ತಿ. ಈಗಾಗಲೇ ದೇಹದ ಶೇ. 85 ಭಾಗಕ್ಕೆ ಹಚ್ಚೆ ಹಾಕಿಸಿಕೊಂಡು, ದೇಹದ ವಿವಿಧ ಭಾಗಗಳಲ್ಲಿ ಮಾರ್ಪಾಡು ಮಾಡಿಸಿಕೊಂಡು ಹೆಸರಾಗಿದ್ದ ಪ್ರಡ್ಡೋ ಇದೀಗ ತಮ್ಮ ಕಿವಿಯನ್ನೂ ಆಪರೇಷನ್‌ ಮೂಲಕ ತೆಗೆಸಿದ್ದಾರೆ. “ಇನ್ನು ಮುಂದೆ ಮಾಸ್ಕ್ ಹಾಕಬೇಕಿಲ್ಲ’ ಎಂದು ಖುಷಿಯಿಂದ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಅಂದ ಹಾಗೆ ಪ್ರಡ್ಡೋ ಇದೇ ಮೊದಲು ಈ ರೀತಿಯ ಸಾಹಸಕ್ಕೆ ಕೈ ಹಾಕಿರುವುದಲ್ಲ. ಅವರು ಈಗಾಗಲೇ ತಮ್ಮ ಹೊಕ್ಕಳನ್ನು, ಮೂಗಿನ ತುದಿಯನ್ನು, ಎರಡೂ ಕೈಗಳ ಉಂಗುರ ಬೆರಳುಗಳನ್ನು ತೆಗೆಸಿಹಾಕಿಕೊಂಡಿದ್ದಾರೆ. ತಲೆ, ಹಣೆಯ ಮೇಲೆ ಕೊಂಬುಗಳನ್ನೂ ಕೂರಿಸಿಕೊಂಡಿದ್ದಾರೆ. ಮುಖದಲ್ಲಿ ಸಾಕಷ್ಟು ಬೆಳ್ಳಿಯ ಆಭರಣಗಳಿಗೂ ಜಾಗ ಮಾಡಿಕೊಟ್ಟಿದ್ದಾರೆ. ಅವರು ಈಗಾಗಲೇ 60ಕ್ಕೂ ಹೆಚ್ಚು ಆಪರೇಷನ್‌ಗಳನ್ನು ಮಾಡಿಸಿಕೊಂಡಿದ್ದಾಗಿ ವರದಿಯಿದೆ! 10 ವರ್ಷಗಳ ಹಿಂದೆ ಅವರು ಕರೊಲ್‌ ಪ್ರಡ್ಡೋ ಹೆಸರಿನ ಮಹಿಳೆಯನ್ನು ಮದುವೆಯಾಗಿದ್ದು, ಆಕೆಯೂ ತನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next