Advertisement

ವನಿತಾ ಫುಟ್ಬಾಲ್‌ ವಿಶ್ವಕಪ್‌-2023: ಬಿಡ್‌ನಿಂದ ಹಿಂದೆ ಸರಿದ ಬ್ರಝಿಲ್‌

10:14 AM Jun 10, 2020 | mahesh |

ಸಾವೊ ಪೌಲೊ (ಬ್ರಝಿಲ್‌): ಫಿಫಾದಿಂದ ಯಾವುದೇ ಆರ್ಥಿಕ ಭರವಸೆ ಲಭಿಸದ ಕಾರಣ 2023ರ ಫಿಫಾ ವನಿತಾ ವಿಶ್ವಕಪ್‌ ಫುಟ್ಬಾಲ್‌ ಪಂದ್ಯಾವಳಿಯ ಬಿಡ್‌ನಿಂದ ಹಿಂದೆ ಸರಿಯುವುದಾಗಿ ಬ್ರಝಿಲ್‌ ಹೇಳಿದೆ. ಕೋವಿಡ್ ವೈರಸ್‌ ಹಾವಳಿ ಮುಂದುವರಿದು, ಕೊನೆ ಗಳಿಗೆಯಲ್ಲಿ ಪಂದ್ಯಾವಳಿ ರದ್ದುಗೊಂಡು, ತಾನು ನಡೆಸಿದ ಸಿದ್ಧತೆಗಳೆಲ್ಲ ವ್ಯರ್ಥವಾದರೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಫಿಫಾದಿಂದ ಯಾವುದೇ ಆರ್ಥಿಕ ನೆರವಿನ ಭರವಸೆ ಲಭಿಸದ ಕಾರಣ ಕೂಟದ ಬಿಡ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಬ್ರಝಿಲಿಯನ್‌ ಫುಟ್ಬಾಲ್‌ ಕಾನ್ಫೆಡರೇಶನ್‌ (ಬಿಎಫ್‌ಸಿ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಕೊಲಂಬಿಯಾಕ್ಕೆ ಲಭಿಸದ ಅವಕಾಶ
ಇದೇ ವೇಳೆ 2023ರ ಪಂದ್ಯಾವಳಿಯ ಬಿಡ್‌ ವೇಳೆ ತಾನು ಕೊಲಂಬಿಯಾವನ್ನು ಬೆಂಬಲಿಸುವುದಾಗಿ ಬಿಎಫ್‌ಸಿ ಹೇಳಿದೆ. ಜಪಾನ್‌ ಮತ್ತು ಆಸ್ಟ್ರೇಲಿಯ -ನ್ಯೂಜಿಲ್ಯಾಂಡ್‌ಗೆ ಆತಿಥ್ಯ ಸಿಗಬಾರದೆಂಬುದು ಬಿಎಫ್‌ಸಿ ಉದ್ದೇಶ. ದಕ್ಷಿಣ ಅಮೆರಿಕ ರಾಷ್ಟ್ರವಾದ ಕೊಲಂಬಿಯಾಕ್ಕೆ ಈವರೆಗೆ ಒಮ್ಮೆಯೂ ವನಿತಾ ವಿಶ್ವಕಪ್‌ ಫುಟ್ಬಾಲ್‌ ಪಂದ್ಯಾವಳಿಯನ್ನು ನಡೆಸುವ ಅವಕಾಶ ಲಭಿಸಿಲ್ಲ .ಲ್ಯಾಟಿನ್‌ ಅಮೆರಿಕ ದೇಶಗಳಲ್ಲೇ ಕೊರೊನಾದಿಂದ ಭಾರೀ ಜೀವ ಹಾನಿಗೊಳಗಾದ ದೇಶವೆಂದರೆ ಬ್ರಝಿಲ್‌. 37 ಸಾವಿರಕ್ಕೂ ಹೆಚ್ಚು ಮಂದಿ ಈ ಮಾರಿಗೆ ಬಲಿಯಾಗಿದ್ದಾರೆ. ದೇಶದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿದೆ. ಹಾಗೆಯೇ ಕಳೆದೊಂದು ದಶಕದಲ್ಲಿ ಬ್ರಝಿಲ್‌ ವಿಶ್ವ ಮಟ್ಟದ ಬಹಳಷ್ಟು ಕ್ರೀಡಾಕೂಟಗಳನ್ನು ನಡೆಸಿದ್ದೂ ಕೂಡ ವನಿತಾ ವಿಶ್ವಕಪ್‌ ಪಂದ್ಯಾವಳಿಯ ಬಿಡ್‌ನಿಂದ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next