Advertisement
ಪೆಟ್ರೊಪೊಲಿಸ್‌ನಲ್ಲಿ ಬುಧವಾರ ಕೇವಲ ಮೂರು ಗಂಟೆಗಳಲ್ಲಿ 10 ಇಂಚಿಗೂ ಅಧಿಕ ಮಳೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಸುರಿದ ಮಳೆ ಪ್ರಮಾಣವನ್ನೂ ಮೀರಿದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಪರಿಣಾಮ ಅನೇಕ ಗುಡ್ಡಗಳು ಕುಸಿದು, ಅದರ ಕೆಳಗಿದ್ದ ಮನೆಗಳೆಲ್ಲವೂ ಭೂಸಮಾಧಿಯಾಗಿವೆ. ಕನಿಷ್ಠ 80 ಮನೆಗಳು ಮಣ್ಣು ಪಾಲಾಗಿವೆ. ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. 400ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.
1932ರ ನಂತರ ಇದೇ ಮೊದಲ ಬಾರಿಗೆ ಪೆಟ್ರೊಪೊಲಿಸ್‌ನಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿದೆ. 3 ಲಕ್ಷ ಜನರಿರುವ 68 ಕಿ.ಮೀ ವಿಸ್ತೀರ್ಣದ ಪೂರ್ತಿ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಡಿಯೋಗಳು ವೈರಲ್:
ಪೆಟ್ರೊಪೊಲಿಸ್ ಪ್ರವಾಹ ಮತ್ತು ಭೂಕುಸಿತದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿವೆ. ಮುಳುಗುತ್ತಿರುವ ಎರಡು ಬಸ್ಸುಗಳಿಂದ ಜನರು ಎದ್ದು ಬರುತ್ತಿರುವುದು, ಗುಡ್ಡವೊಂದು ಕುಸಿದು, ಮನೆಗಳೆಲ್ಲ ನೆಲಸಮವಾಗುತ್ತಿರುವ ಅನೇಕ ವಿಡಿಯೋಗಳು ಎಲ್ಲೆಡೆ ಹರಿದಾಡಿವೆ.
Related Articles
Advertisement