Advertisement

Bravery of Navy: ‘ಇಂಡಿಯಾ ಜಿಂದಾಬಾದ್‌’ ಎಂದ ಪಾಕಿಸ್ಥಾನೀಯರು!

12:11 AM Apr 01, 2024 | Vishnudas Patil |

ಇಸ್ಲಾಮಾಬಾದ್‌: “ಇಂಡಿಯಾ ಜಿಂದಾಬಾದ್‌’… ಭಾರತೀಯರು ಹೆಮ್ಮೆಯಿಂದ ಹೇಳುತ್ತಿದ್ದ ಈ ಘೋಷವಾಕ್ಯವನ್ನು ಈಗ ಪಾಕಿಸ್ಥಾನೀಯರೂ ಕೂಡ ಹೆಮ್ಮೆಯಿಂದ ಹೇಳಿದ್ದಾರೆ. ಇದಕ್ಕೆ ಕಾರಣ, ಸಂಕಷ್ಟ ದಲ್ಲಿ ಸಿಕ್ಕಿದ್ದ ಪಾಕಿಸ್ಥಾನೀಯರನ್ನು ರಾಷ್ಟ್ರಬೇಧ ಮರೆತು ರಕ್ಷಿಸಿದ ಭಾರತದ ನೌಕಾಪಡೆಯ ಶೌರ್ಯ ಹಾಗೂ ಔದಾರ್ಯತೆ!.

Advertisement

ಯೆಮೆನ್‌ನ ಸೊಕೊತ್ರಾ ದ್ವೀಪದಲ್ಲಿ ಕಡಲ್ಗಳ್ಳರ ವಶವಾಗಿದ್ದ ಇರಾನಿಯನ್‌ ಮೂಲದ ಮೀನುಗಾರಿಕಾ ಹಡಗನ್ನು ಶನಿವಾರ ಭಾರತೀಯ ನೌಕಾಪಡೆಯು ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನದ 23 ಪ್ರಜೆಗಳು ಸೇರಿದಂತೆ ಹಡಗಿನಲ್ಲಿದ್ದ ಎಲ್ಲ ಸಿಬಂದಿಯನ್ನು ರಕ್ಷಿಸಲಾಗಿತ್ತು. ಈ ವೇಳೆ ಪಾಕಿಸ್ಥಾನೀ ಯರು “ಇಂಡಿಯಾ ಜಿಂದಾಬಾದ್‌’ ಎಂದು ಘೋಷಣೆ ಮೊಳಗಿಸಿ, ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next