Advertisement

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

01:09 AM Nov 28, 2024 | Team Udayavani |

ಹೊಸದಿಲ್ಲಿ: ಬಾಲಿವುಡ್‌ ತಾರೆಯರಿಗಿಂತ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಬ್ರ್ಯಾಂಡ್‌ ಎಂಡೋರ್ಸರ್‌ ಸಂಸ್ಥೆಯ ವರದಿ ಹೇಳಿದೆ.

Advertisement

ಮುಂಬಯಿ ಮೂಲದ, ಹಂಸ ಸಂಶೋಧನ ಸಂಸ್ಥೆಯ ಬ್ರ್ಯಾಂಡ್‌ ಎಂಡೋರ್ಸರ್‌ ವರದಿ-2024ರ ಪ್ರಕಾರ, ಭಾರತೀಯ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ, ಎಂ.ಎಸ್‌. ಧೋನಿ ಮತ್ತು ಸಚಿನ್‌ ತೆಂಡುಲ್ಕರ್‌ ಅಗ್ರ 3 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್‌ ತಾರೆ ಶಾರುಖ್‌ ಖಾನ್‌ಗೆ 4ನೇ ಸ್ಥಾನ ಲಭಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರಿಕೆಟಿಗರ ಪ್ರದರ್ಶನ, ಕ್ರಿಕೆಟರ್‌ಗಳಿಗಿರುವ ಭಾರೀ ಸಂಖ್ಯೆಯ ಅಭಿಮಾನಿಗಳು, ಕ್ರಿಕೆಟಿಗರ ಮೇಲಿನ ವಿಶ್ವಾಸಾರ್ಹತೆ.. ಈ ಎಲ್ಲ ಕಾರಣದಿಂದಾಗಿ ಕ್ರಿಕೆಟರ್‌ಗಳ ಬ್ರ್ಯಾಂಡ್‌ ಮೌಲ್ಯ ಬಾಲಿವುಡ್‌ ತಾರೆಯರಿಗಿಂತ ಮೇಲೇರುತ್ತಿದೆ ಎಂದು ವರದಿ ಹೇಳಿದೆ. ವರದಿಯ ಅಗ್ರ 10 ಜನಪ್ರಿಯರ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌, ಅಮಿತಾಭ್‌ ಬಚ್ಚನ್‌, ಅಲ್ಲು ಅರ್ಜುನ್‌, ಸಲ್ಮಾನ್‌ ಖಾನ್‌, ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next