Advertisement

ಬ್ರಾಂಡ್‌ ಬೆಂಗಳೂರಿಗೆ ಆದ್ಯತೆ

12:07 PM Mar 26, 2017 | |

ಬೆಂಗಳೂರು: ಸಿಲಿಕಾನ್‌ ವ್ಯಾಲಿ ಖ್ಯಾತಿಯ ಮಹಾನಗರವನ್ನು “ಬ್ರಾಂಡ್‌ ಬೆಂಗಳೂರು’ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ.

Advertisement

ಇ-ಆಡಳಿತಕ್ಕೆ ಹೆಚ್ಚಿನ ಒತ್ತು. ಕಡತ ವಿಲೇವಾರಿ ಬಗ್ಗೆ ಸಾರ್ವಜನಿಕರಿಗೆ ಇ- ಮೇಲ್‌ ಮತ್ತು ಎಸ್‌ಎಂಎಸ್‌ ಮೂಲಕ ಪಾರದರ್ಶಕ­ವಾಗಿ ಮಾಹಿತಿ, ಕಡತ ನಿರ್ವಹಣೆಗೆ ತಂತ್ರಾಂಶ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆಯ ಕ್ಷೇತ್ರಾಧಿಕಾರಿಗಳಿಗೆ ಟ್ಯಾಬ್‌ ಒದಗಿಸಿ ಸ್ಮಾರ್ಟ್‌ ಸಿಟಿ ಇನಿಷಿಯೇಟಿವ್‌ ಮೊಬೈಲ್‌ ಅಪ್ಲಿಕೇಷನ್‌ ಅನುಷ್ಠಾನಗೊಳಿಸುವ ಕ್ರಮಗಳು ಇದರಲ್ಲಿ ಸೇರಿವೆ.

ಲೆಕ್ಕಪತ್ರ ನಿರ್ವಹಣೆ ಹಾಗೂ ಆರ್ಥಿಕ ವ್ಯವಸ್ಥೆಗೆ ತಂತ್ರಾಂಶಗಳನ್ನು ವಿನ್ಯಾಸಗೊಳಿಸಿ ಅಳವಡಿಸಲು ಕ್ರಮ. ಖಾತಾ ನೋಂದಣಿ ಹಾಗೂ ಸಮಸ್ಯೆಗಳನ್ನು ಗಣಕೀಕೃತಗೊಳಿಸಲುವ ಪದ್ಧತಿ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಇಸ್ರೋ ಜತೆ ಒಡಂಬಡಿಕೆ ಮಾಡಿಕೊಂಡು ಇ-ಆಡಳಿತ ಪದ್ಧತಿ ಅನುಷ್ಠಾನಗೊಳಿಸಲು ಪಾಲಿಕೆಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಡತ ಹಾಗೂ ದಾಖಲೆಗಳನ್ನು ಸ್ಕ್ಯಾನಿಂಗ್‌ ಹಾಗೂ ಗಣಕೀಕರಣ ಗೊಳಿಸುವುದು.

ಮೊದಲ ಬಾರಿಗೆ ಪಾಲಿಕೆ ನೌಕರರು ಮತ್ತು ಸಿಬ್ಬಂದಿಗಳ ಸೇವಾ ಪುಸ್ತಕ, ಜಾಹೀರಾತು, ಕಂದಾಯ ಹಾಗೂ ಇತರೆ ವಿಭಾಗಗಳ ಕಡತಗಳ ಸ್ಕ್ಯಾನ್‌ ಹಾಗೂ ಗಣಕೀಕರಣಗೊಳಿಸಲು ಕ್ರಮಕೈಗೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಜನರಿಗೆ ನೀಡಿದ ಭರವಸೆಯಂತೆ ಉತ್ತಮ, ಬಜೆಟ್‌ ಕೊಟ್ಟಿದ್ದೇವೆ. ಪಾಲಿಕೆಯ ಆದಾಯ ಮೂಲಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನಗಳನ್ನು ಗಣನೆಗೆ ತೆಗೆದುಕೊಂಡು ವಾಸ್ತವಿಕ ಬಜೆಟ್‌ ಮಂಡಿಸಿದ್ದೇವೆ. 
– ಜಿ.ಪದ್ಮಾವತಿ ಮೇಯರ್‌ 

Advertisement

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹೇಳಲಾಗಿ ರುವ ಅಂಶಗಳನ್ನು ಮತ್ತೆ ಓದಲಾಗಿದೆ. ಬಜೆಟ್‌ನಿಂದಾಗಿ ಜನತೆಗೆ ನಿರಾಸೆಯಾಗಿದ್ದು, ರಸ್ತೆ ಅಗೆಯುವುದಕ್ಕೆ ಲಕ್ಷಾಂತರ ದಂಡ ವಿಧಿಸುವುದು ಅವೈಜ್ಞಾನಿಕವಾಗಿದೆ. 
– ರವಿಸುಬ್ರಹ್ಮಣ್ಯ, ಬಿಜೆಪಿ ಶಾಸಕ

ಕಳೆದ ಬಜೆಟ್‌ನಲ್ಲಿ ಬಿಬಿಎಂಪಿಗೆ 7,300 ಕೋಟಿ ಅನುದಾನ ಘೋಷಿಸಿದ್ದ ರಾಜ್ಯ ಸರ್ಕಾರ, ಕೊಟ್ಟಿದ್ದು ಮಾತ್ರ 1,300 ಕೋಟಿ ರೂ. ಉಳಿದ 5,973 ಕೋಟಿ ರೂ. ಏನಾಯ್ತು ಎಂಬ ಬಗ್ಗೆ ಪ್ರಸ್ತುತ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ
– ಪದ್ಮನಾಭರೆಡ್ಡಿ ಪ್ರತಿಪಕ್ಷದ ನಾಯಕ 

ಮಹಿಳೆಯರು ಪ್ರತಿನಿಧಿಸುವ ವಾರ್ಡ್‌ ಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂಬುದು ಕಣ್ಣೊರೆಸುವ ತಂತ್ರವಾಗಿದೆ. ಕಳೆದ ಬಜೆಟ್‌ನಲ್ಲಿ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದು, ಈವರೆಗೆ ಅನುದಾನ ಬಂದಿಲ್ಲ.
– ಪೂರ್ಣಿಮಾ ಶ್ರೀನಿವಾಸ್‌, ಬಿಜೆಪಿ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next