Advertisement

ಬ್ರಹ್ಮಾವರ: ಬೈಕ್‌ನಿಂದ ಬಿದ್ದು ಖಾಸಗಿ ಕಾಲೇಜಿನ ಗ್ರಂಥಪಾಲಕಿ ಮೃತ್ಯು

10:16 PM Jul 15, 2023 | Team Udayavani |

ಬ್ರಹ್ಮಾವರ: ಬೈಕ್‌ನಿಂದ ಬಿದ್ದು ಇಲ್ಲಿನ ಖಾಸಗಿ ಕಾಲೇಜಿನ ಗ್ರಂಥಪಾಲಕಿ ಕೋಟೇಶ್ವರದ ಶಾಂಭವಿ(59) ಮೃತಪಟ್ಟಿದ್ದಾರೆ.

Advertisement

ಅವರು ಶನಿವಾರ ಮಧ್ಯಾಹ್ನ ಕರ್ತವ್ಯ ಮುಗಿಸಿ ಚಾಂತಾರಿನಿಂದ ಬ್ರಹ್ಮಾವರ ಬಸ್‌ ನಿಲ್ದಾಣದವರೆಗೆ ಹೋಗಲು ಕಾಲೇಜಿನ ಲ್ಯಾಬ್‌ ಟೆಕ್ನಿಶಿಯನ್‌ ಸುಧೀಂದ್ರ ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಕೊಳಂಬೆ ಬಳಿ ತೆರಳುವಾಗ ಜೋರಾದ ಮಳೆ ಬಂದಿದ್ದು ಈ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯಾವಾಗಲೂ ಬಸ್‌ನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next